ಕಾಂಗ್ರೆಸ್ ಕಾರ್ಯಕರ್ತರಿಂದ ಠಾಣೆ ಶವವಿಟ್ಟು ಪ್ರತಿಭಟನೆಗೆ ಯತ್ನ

ಕಾಂಗ್ರೆಸ್ ಕಾರ್ಯಕರ್ತರಿಂದ ಠಾಣೆ ಶವವಿಟ್ಟು ಪ್ರತಿಭಟನೆಗೆ ಯತ್ನ
ಕಾಂಗ್ರೆಸ್ ಕಾರ್ಯಕರ್ತರಿಂದ ಠಾಣೆ ಶವವಿಟ್ಟು ಪ್ರತಿಭಟನೆಗೆ ಯತ್ನ
Published on

ಧಾರವಾಡ: ಇಲ್ಲಿನ ಹಾಶ್ಮಿನಗರದಲ್ಲಿ ಶುಕ್ರವಾರ ರಾತ್ರಿ ಹತ್ಯೇಗಿಡಾದ ಯುವ ಕಾಂಗ್ರೆಸ್​ ರಾಜ್ಯ ಪ್ರಧಾನ ಕಾರ್ಯದರ್ಶಿ ಫೈರೋಜ್​ ಪಠಾಣ್​ ಶವವನ್ನು ಬೆಂಬಲಿಗರು ಶನಿವಾರ ಉಪನಗರ ಠಾಣೆ ಎದುರು ಇಟ್ಟು ಪ್ರತಿಭಟಿಸಲು ಯತ್ನಿಸಿದರು. ಯುವ ಕಾಂಗ್ರೆಸ್​ ರಾಜ್ಯ ಉಪಾಧ್ಯಕ್ಷ ಅಬ್ದುಲ್​ ದೇಸಾಯಿ ನೇತೃತ್ವದಲ್ಲಿ ಬೆಂಬಲಿಗರು ಪ್ರತಿಭಟನೆಗೆ ಯತ್ನಿಸಿದಾಗ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು. ಕೆ.ಸಿ. ಪಾರ್ಕ್​ ಎದುರು ಪ್ರತಿಭಟನಾಕಾರರನ್ನು ತಡೆದ ಪೊಲೀಸರು ಮನವೊಲಿಸಿ ಶವವನ್ನು ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net