ತುರ್ತ ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್​ನಿಂದ ಆರ್​ಎಸ್​ಎಸ್ ಬಗ್ಗೆ ಪ್ರಶ್ನೆ rss

rss ಬೆಳಗಾವಿ ಸಂಸದ ಜಗದೀಶ ಶೆಟ್ಟರ್
rss ಬೆಳಗಾವಿ ಸಂಸದ ಜಗದೀಶ ಶೆಟ್ಟರ್
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಿಎಂ ಶೆಟ್ಟರ್ ಅಸಮಾಧಾನ
  • ವ್ಯಕ್ತಿತ್ವ ನಿಮಾಣದ ಚಟುವಟಿಕೆಗಳನ್ನು ನಡೆಸುತ್ತಿದೆ
  • ಸಂಘದ ಶಾಖೆಗೆ ಬಂದು ಸೇರಬಹುದು
ಹುಬ್ಬಳ್ಳಿ:
ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಸಂದರ್ಭದಲ್ಲಿ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಪ್ರಿಯಾಂಕ್ ಖರ್ಗೆ ಅವರು, ಜನರ ಸುರಕ್ಷತೆಗಾಗಿ ಕೆಲಸ ಮಾಡುವುದನ್ನು ಬಿಟ್ಟು, ಆರ್​ಎಸ್​ಎಸ್ ನಿಂದನೆಯಲ್ಲಿ ತೊಡಗಿ ತಮ್ಮ ಅಸಮರ್ಥತೆ ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. 
ರಾಷ್ಟ್ರಹಿತಕ್ಕಾಗಿ ಆರ್​ಎಸ್​ಎಸ್ ಪಾರದರ್ಶಕವಾಗಿ ಶ್ರಮಿಸುತ್ತಿದೆ. ರಾಷ್ಟ್ರದ ಹಿತಾಸಕ್ತಿಗೆ ಸೇವೆ ಸಲ್ಲಿಸುತ್ತಿರುವ ಆರ್​ಎಸ್​ಎಸ್​ಗೆ ಪ್ರತ್ಯೇಕ ನೋಂದಣಿಯ ಅಗತ್ಯ ಇಲ್ಲವೆಂದು ನ್ಯಾಯಾಲಯಗಳು ಸಹ ವಿವಿಧ ಪ್ರಕರಣಗಳ ಸಂದರ್ಭದಲ್ಲಿ ಸ್ಪಷ್ಟಪಡಿಸಿವೆ ಎಂದು ತಿಳಿಸಿರುವ ಶೆಟ್ಟರ್, ನಿಮಗೂ ಆಸಕ್ತಿ ಇದ್ದರೆ ಸಂಘದ ಶಾಖೆಗೆ ಬಂದು ಸೇರಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ಆಹ್ವಾನ ನೀಡಿದ್ದಾರೆ. 
100 ವರ್ಷಗಳ ಇತಿಹಾಸ ಹೊಂದಿರುವ ಸಂಘವು ರಾಷ್ಟ್ರಾದ್ಯಂತ ಲಕ್ಷಾಂತರ ಶಾಖೆಗಳನ್ನು ಹೊಂದಿದ್ದು, ಯುವಕರಲ್ಲಿ ದೇಶಭಕ್ತಿ ಹಾಗೂ ವ್ಯಕ್ತಿತ್ವ ನಿಮಾಣದ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ತಿಳಿಸಿದ್ದಾರೆ. 
ರಾಜ್ಯದಲ್ಲಿ ಅತಿ ಹೆಚ್ಚು ರೌಡಿ ಶೀಟರ್​ಗಳನ್ನು ಹೊಂದಿರುವ ಹಾಗೂ ಶಿಕ್ಷಣದಲ್ಲಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಸಚಿವ ಪ್ರಿಯಾಂಕ್ ಅವರ ಸ್ವಂತ ಜಿಲ್ಲೆ ಕಲಬುರ್ಗಿ ಹೊಂದಿದೆ ಎಂದು ವ್ಯಂಗ್ಯವಾಡಿದ್ದಾರೆ.
ನಿಮ್ಮ ಜಿಲ್ಲೆಯ ಅಭಿವೃದ್ಧಿ ಹಾಗೂ ರಾಜ್ಯದ ಕಾನೂನು ಸುವ್ಯವಸ್ಥೆ ಕಾಯುವ ಜವಾಬ್ದಾರಿಯನ್ನು ಅರಿತು ಮೊದಲು ಕೆಲಸ ಮಾಡಿ. ಮತಬ್ಯಾಂಕ್ ರಾಜಕಾರಣಕ್ಕಾಗಿ ದೇಶಭಕ್ತ ಸಂಘಟನೆಯನ್ನು ನಿಂದಿಸುವುದನ್ನು ನಿಲ್ಲಿಸಿ ಎಂದು ಜಗದೀಶ ಶೆಟ್ಟರ್ ಬುದ್ಧಿ ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net