ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿಸಿಲ್ಲ womens

womens ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ
womens ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸರ್ಕಾರ ತರಾತುರಿಯಲ್ಲಿ ಕಾಯ್ದೆ ಜಾರಿಗೆ ಮುಂದಾಯಿತು
  • ಲೋಕಸಭೆ ಕ್ಷೇತ್ರ ಮರುವಿಂಗಡಣೆ ಸೂಕ್ಷ್ಮ ವಿಚಾರ
  • ಎನ್​ಡಿಎ ಸರ್ಕಾರದ ಕುತಂತ್ರ
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರಲ್ಲಿಯೇ ಮಹಿಳಾ ಮೀಸಲಾತಿ ಅಂಗೀಕಾರಗೊಂಡಿತ್ತು. 2024ರಲ್ಲಿ ಈ ಕಾಯ್ದೆಯ ಕಾನೂನು ರಚಿಸಿದ್ದರೆ ಸಾಕಾಗಿತ್ತು ಎಂದರು.
ಯಾವುದಾದರೂ ಮಸೂದೆ ಮಂಡಿಸಬೇಕಾದರೆ ಪ್ರತಿಪಕ್ಷದವರೊಂದಿಗೆ ಮುಂಚಿತವಾಗಿಯೇ ರ್ಚಚಿಸಲಾಗುತ್ತದೆ. ಆದರೆ, ವಿವಿಧ ರಾಜ್ಯಗಳ ಚುನಾವಣೆ ಮಧ್ಯೆ ಯಾವುದೇ ಮಾಹಿತಿ ನೀಡದೇ ಕೇಂದ್ರ ಸರ್ಕಾರ ತರಾತುರಿಯಲ್ಲಿ ಕಾಯ್ದೆ ಜಾರಿಗೆ ಮುಂದಾಯಿತು ಎಂದು ಆರೋಪಿಸಿದರು.
ಲೋಕಸಭೆ ಕ್ಷೇತ್ರ ಮರುವಿಂಗಡಣೆ ಸೂಕ್ಷ್ಮ ವಿಚಾರ. ಈ ವಿಷಯಕ್ಕೆ ಮಹಿಳಾ ಮೀಸಲಾತಿ ತಳಕು ಹಾಕಿರುವುದು ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರದ ಕುತಂತ್ರ ಎಂದು ದೂರಿದರು.
ದಿ. ರಾಜೀವ ಗಾಂಧಿ ಅವರು ಪ್ರಧಾನಿಯಾಗಿದ್ದಾಗಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೊಳಿಸಿದ್ದರು.
ಮಹಿಳಾ ಮೀಸಲಾತಿಯೊಂದಿಗೆ ಕ್ಷೇತ್ರ ಮರುವಿಂಗಡಣೆ ಕಾಯ್ದೆಗೆ ತಳಕು ಹಾಕುವ ಮೂಲಕ ಬಿಜೆಪಿ ಮಹಿಳೆಯರಿಗೆ ಮೋಸ ಮಾಡಿದೆ ಎಂದು ಹೇಳಿದರು.
ಮುಂದಿನ ಲೋಕಸಭೆ ಚುನಾವಣೆ ಸೇರಿ ಇನ್ನಿತರ ಎಲ್ಲ ಚುನಾವಣೆಗಳ ಮೇಲೆ ಕಣ್ಣಿಟ್ಟು ಬಿಜೆಪಿ ಈ ನಾಟಕವಾಡುತ್ತಿದೆ. ಮಹಿಳೆಯರ ಮೇಲೆ ಅತ್ಯಾಚಾರವಾದಾಗ, ಅವರಿಗೆ ಅನ್ಯಾಯವಾದಾಗ ಬೀದಿಗಿಳಿದು ಪ್ರತಿಭಟಿಸದ ಬಿಜೆಪಿ, ಜನರ ಕಣ್ಣಿಗೆ ಮಣ್ಣೆರೆಚುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಪ್ರತಿಭಟನೆಗೆ ಮುಂದಾಗಿದೆ ಎಂದರು.
ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರ, ದೀಪಾ ಗೌರಿ, ಸ್ವಾತಿ ಮಳಗಿ, ಸುವರ್ಣ ಕಲಕುಂಟಲ, ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net