congress celebration ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ
congress celebration ಸಿಎಲ್ಪಿ ನಾಯಕರಾಗಿ ಆಯ್ಕೆಯಾದ ಡಿ.ಕೆ. ಶಿವಕುಮಾರ ಅವರಿಗೆ ಹುಬ್ಬಳ್ಳಿಯ ಅಕ್ಷಯ ಪಾರ್ಕ್ ವೃತ್ತದಲ್ಲಿ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಭಿನಂದನೆ ಕಾರ್ಯಕ್ರಮ ನಡೆಯಿತು. ರಜತ್ ಉಳ್ಳಾಗಡ್ಡಿಮಠ, ವೀರೇಶ ಕಡಕೋಳಮಠ, ಸೆಂಥಿಲ್ ಕುಮಾರ್, ಸಾದಿಕ್ ಯಕ್ಕುಂಡಿ, ಸುವರ್ಣ ಕಲ್ಲಕುಂಟ್ಲ, ಇತರರು ಇದ್ದರು.
ಹುಬ್ಬಳ್ಳಿ: congress celebration ಸಿಎಲ್ಪಿ ನಾಯಕರಾಗಿ ಡಿ.ಕೆ. ಶಿವಕುಮಾರ ಆಯ್ಕೆಯಾದ ಹಿನ್ನೆಲೆಯಲ್ಲಿ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ಅಕ್ಷಯ ಪಾರ್ಕ್ ವೃತ್ತದಲ್ಲಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಯಿತು.
ಪಕ್ಷದ ಹಿರಿಯರು, ಸ್ಥಳಿಯ ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಿಹಿ ಹಂಚಿ, ಪಟಾಕಿ ಸಿಡಿಸಿ ಹಾಗೂ ಘೋಷಣೆಗಳನ್ನು ಕೂಗುವ ಮೂಲಕ ಸಂತೋಷವನ್ನು ಹಂಚಿಕೊಂಡರು. ಶಿವಕುಮಾರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಡಿ.ಕೆ. ಶಿವಕುಮಾರ ಅವರೊಂದಿಗಿನ ಬಾಂಧವ್ಯ ಬಹಳಷ್ಟು ಹಳೆಯದು ಮತ್ತು ಭಾವನಾತ್ಮಕವಾದದ್ದು. ಅವರು ನನ್ನ ತಂದೆಯವರ ಆತ್ಮೀಯ ಒಡನಾಡಿಯಾಗಿದ್ದರು.
ಅಲ್ಲದೆ, ರಂಭಾಪುರಿ ಪೀಠದ ವೀರ ಗಂಗಾಧರ ಜಗದ್ಗುರುವಿನ ಶಿಷ್ಯರಾಗಿ, ಪ್ರತಿ ಹಂತದಲ್ಲೂ ನನಗೆ ಮಾರ್ಗದರ್ಶಕರಾಗಿ, ಪ್ರೇರಣೆಯಾಗಿ ಮತ್ತು ದಾರಿದೀಪವಾಗಿ ನಿಂತಿದ್ದಾರೆ. ಅವರಲ್ಲಿರುವ ಸಂಘಟನಾ ಚತುರತೆ, ಬದ್ಧತೆ ಮತ್ತು ಕಷ್ಟದ ಸಮಯದಲ್ಲೂ ಸ್ಥಿರವಾಗಿ ನಿಲ್ಲುವ ಗುಣ ನಮಗೆಲ್ಲರಿಗೂ ಆದರ್ಶಪ್ರಾಯ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ವೀರೇಶ ಕಡಕೋಳಮಠ, ಷರೀಫ್ ಗರ್ಗದ, ಪಾಲಿಕೆ ಸದಸ್ಯರಾದ ಸೆಂಥಿಲ್ ಕುಮಾರ, ಸಾದಿಕ್ ಯಕ್ಕುಂಡಿ, ಸುವರ್ಣ ಕಲ್ಲಕುಂಟ್ಲ, ಇಕ್ಬಾಲ್ ನವಲೂರ.