ಸಾಮರ್ಥ್ಯ ಹೊರಬರಬೇಕಾದರೆ ಆತ್ಮವಿಶ್ವಾಸ ಅಗತ್ಯ emerge

emerge ಹುಬ್ಬಳ್ಳಿಯ ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಪಿ ಜಿ. ಚೋಪ್ರಾ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಡಾ. ಗುರುರಾಜ ಪಾಟೀಲ, ಪ್ರೊ. ಎಸ್.ಕೆ. ಆದಪ್ಪನವರ, ಆರ್.ಟಿ. ತವನಪ್ಪನವರ, ಅನಸೂಯಾ ಪಾಟೀಲ ಹಾಗೂ ಇತರರಿದ್ದರು.
emerge ಹುಬ್ಬಳ್ಳಿಯ ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಪಿ ಜಿ. ಚೋಪ್ರಾ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಡಾ. ಗುರುರಾಜ ಪಾಟೀಲ, ಪ್ರೊ. ಎಸ್.ಕೆ. ಆದಪ್ಪನವರ, ಆರ್.ಟಿ. ತವನಪ್ಪನವರ, ಅನಸೂಯಾ ಪಾಟೀಲ ಹಾಗೂ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೈಹಿಕ ಹಾಗೂ ಮಾನಸಿಕವಾಗಿ ಚೈತನ್ಯವಂತರಾಗಬೇಕು.
  • ಕನ್ನಡ ಶಾಲೆಗಳಿಗೆ ಉಜ್ವಲ ಭವಿಷ್ಯವಿದೆ.
  • ಪ್ರತಿಯೊಬ್ಬ ವ್ಯಕ್ತಿಯಲ್ಲಿ ಅಗಣಿತವಾದ ಸಾಮರ್ಥ್ಯ ಇದೆ.
ಹುಬ್ಬಳ್ಳಿ :
ಹುಬ್ಬಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಗರ ಘಟಕ ಹಾಗೂ ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಪಿ ಜಿ. ಚೋಪ್ರಾ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸಕರಾಗಿ ಮಾತನಾಡಿದರು.
ಉತ್ತಮ ಆಹಾರ ಸೇವಿಸುವ ಮೂಲಕ ದೈಹಿಕ ಹಾಗೂ ಮಾನಸಿಕವಾಗಿ ಚೈತನ್ಯವಂತರಾಗಬೇಕು. ಕಲಿಕೆಯಲ್ಲಿ ಆಟಕ್ಕೆ ವಿಶೇಷ ಮಹತ್ವ ಇದೆ ಎಂದು ಹೇಳಿದರು.
ಉದ್ಘಾಟಿಸಿ ಮಾತನಾಡಿದ ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಟಿ. ತವನಪ್ಪನವರ, ಕನ್ನಡ ಶಾಲೆಗಳ ಸ್ಥಿತಿ ಸುಧಾರಿಸಿದರೆ ಮಾತ್ರ ಕನ್ನಡ ಶಾಲೆಗಳಿಗೆ ಉಜ್ವಲ ಭವಿಷ್ಯವಿದೆ ಎಂದರು.
ಪ್ರೊ. ಎಸ್.ಕೆ. ಆದಪ್ಪನವರ ಅವರು ಕನ್ನಡ ಲಿಪಿ ಮತ್ತು ಅಂಕಿಗಳ ಪ್ರಾಚೀನತೆಯನ್ನು ವಿವರಿಸಿದರು.
ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದ ಅನಿತಾ ದರ್ಜೆ, ಲಕ್ಷಾ ಹತ್ತಿಯವರ ಹಾಗೂ ಸುಮಿತ ಜಾಧವ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಕನ್ನಡ ಭಾಷೆಯ ಪಠ್ಯದ ಪರೀಕ್ಷೆಯಲ್ಲಿ ಶೇ. 100ರಷ್ಟು ಅಂಕ ಗಳಿಸಿದವರಿಗೆ ಬಹುಮಾನ ಕೊಡುವುದಾಗಿ ತಿಳಿಸಿದರು.
ದತ್ತಿ ದಾನಿ ಎ.ಬಿ. ಉಪ್ಪಿನ ಹಾಗೂ ಎಸ್.ಎನ್. ಅರಳಿಕಟ್ಟಿ ಮಾತನಾಡಿದರು. ಪ್ರೊ. ಕೆ.ಎಸ್. ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹಾವೀರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿಮಲ ತಾಳಿಕೋಟಿ , ಎ.ಸಿ. ಬೀಳಗಿ, ಎ.ಸಿ. ನವಲೂರ, ಚನ್ನಬಸಪ್ಪ ಧಾರವಾಡಶೆಟ್ಟರ, ಸಿದ್ದಮ್ಮ ಅಡವೆಣ್ಣವರ ವೇದಿಕೆಯಲ್ಲಿ ಉಪಸ್ಥಿತರಿದ್ದರು,
ಕಸಾಪ ಪದಾಧಿಕಾರಿಗಳಾದ ವಿದ್ಯಾ ವಂಟಮುರಿ, ಅನಸೂಯಾ ಪಾಟೀಲ, ಸಂಧ್ಯಾ ದೀಕ್ಷಿತ, ಶಾಂತಾ ನಾಡಿಗೇರ, ರೇಣುಕಾ ದೇಸಾಯಿ, ಜಯಶ್ರೀ ಉಮಚಗಿ, ಶಕುಂತಲಾ ಹೂಗಾರ, ವಿಜಯಕುಮಾರ ಉಳವಪ್ಪನವರ, ವೀರಣ್ಣ ಅಂಗಡಿ, ಪಾರ್ವತಿ ಶೀಲವಂತರ ಹಾಗೂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net