ಪಶುವೈದ್ಯಾಧಿಕಾರಿ ನೇಮಕದಲ್ಲಿನ ಭ್ರಷ್ಟಾಚಾರಕ್ಕೆ ಖಂಡನೆ

ಎಬಿವಿಪಿ' ಯಿಂದ ಪ್ರತಿಭಟನೆ
ಎಬಿವಿಪಿ' ಯಿಂದ ಪ್ರತಿಭಟನೆ
Published on
ಧಾರವಾಡ: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್​ಸಿ) ಅಕ್ರಮಗಳು ಹಾಗೂ "ಕೆಪಿಎಸ್​ಸಿ' ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಭ್ರಷ್ಟಾಚಾರ ಖಂಡಿಸಿ ಅಖಿಲ ಭಾರತ ವಿದ್ಯಾಥಿರ್ ಪರಿಷತ್​ (ಎಬಿವಿಪಿ) ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸರ್ಕಾರಿ ಹುದ್ದೆಗೆ ಆಯ್ಕೆಯಾಗಿ ಜನರ ಸೇವೆ ಮಾಡುವುದು ಪ್ರತಿಯೊಬ್ಬ ವಿದ್ಯಾವಂತ ಯುವಕ-&ಯುವತಿಯರ ಕನಸಾಗಿರುತ್ತದೆ. ಆದರೆ, ಕೆಪಿಎಸ್​ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸರಣಿ ಅಕ್ರಮ, ಭ್ರಷ್ಟಾಚಾರ ನಡೆಯುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಚೆಗೆ ಸುಮಾರು 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯ ಪರೀೆಯಲ್ಲಿ ಅಕ್ರಮ ನಡೆದಿರುವುದು, ಜುಲೈ 17ರಂದು ಹೊರಬಿದ್ದ ಲಿತಾಂಶದಲ್ಲಿ ಗೊತ್ತಾಗಿದೆ. ಓಎಂಆರ್​ ಶೀಟ್​ ಟ್ಯಾಂಪರಿಂಗ್​ನಂತಹ ಆರೋಪಗಳು ಕೇಳಿಬಂದಿವೆ. ಒಂದು ಹುದ್ದೆಗೆ ಬರೋಬ್ಬರಿ 80 ಲಕ್ಷ ರೂ. ಬೆಲೆ ನಿಗದಿಪಡಿಸಿ, ಅಭ್ಯಥಿರ್ಗಳಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ಗೊತ್ತಾಗಿದೆ.
ಹಣ ನೀಡಿದವರು ಮೆರಿಟ್​ ಲಿಸ್ಟ್​ನಲ್ಲಿ ಜಾಗ ಪಡೆದಿರುವುದು, ಕಷ್ಟಪಟ್ಟು ಶ್ರಮಿಸಿದ ಲಕ್ಷಾಂತರ ಆಕಾಂಕ್ಷಿಗಳಿಗೆ ಎಸಗಿದ ದ್ರೋಹವಾಗಿದೆ. ಕೆಪಿಎಸ್​ಸಿ ಅಧ್ಯಕ್ಷರು ಸುಳ್ಳು ದಾಖಲೆ ಹಾಗೂ ತಮ್ಮ ಪ್ರಭಾವ ಬಳಸಿ, ತಮ್ಮ ಮಕ್ಕಳಿಗೆ ಸರ್ಕಾರಿ ಹುದ್ದೆ ದೊರೆಯುವಂತೆ ಮಾಡುವ ಮೂಲಕ ಆ ಹುದ್ದೆಗೆ ಕಳಂಕ ತಂದಿದ್ದಾರೆ. ಇಂತಹ ಸಾಲು ಸಾಲು ಭ್ರಷ್ಟಾಚಾರದಿಂದ ಕೆಪಿಎಸ್​ಸಿ ಮೇಲಿದ್ದ ಗೌರವ ಸಂರ್ಪೂಣ ಹೋಗಿದೆ.
ಕೆಪಿಎಸ್​ಸಿ ಅಧ್ಯಕ್ಷರ ಜತೆ ಎಲ್ಲ ಸದಸ್ಯರನ್ನು ತನಿಖೆಗೆ ಒಳಪಡಿಸಬೇಕು. ತನಿಖೆಗಾಗಿ ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ವಹಿಸಬೇಕು. 5 ವರ್ಷದ ಕೆಪಿಎಸ್​ಸಿಯ ಎಲ್ಲ ರೀತಿಯ ಪರೀಕ್ಷೆಗಳ ಕುರಿತು ತನಿಖೆ ನಡೆಯಬೇಕು. ಾಸ್ಟ್​ಟ್ರ್ಯಾಕ್​ ಕೋರ್ಟ್​ ಜಾರಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.
ಸಚಿನ್​ ಕೋಟ್ಯಾಳ್​, ಅಭಿಷೇಕ ದೊಡ್ಡಮನಿ, ನಾಗದತ್ತ ಒಡೆಯರ, ಸೋಹನ್​ ಮಲ್ಲಾಡದ, ಮೌಳಿತೇಜ ದ್ಯಾಮನಗೌಡ, ಸುಮಿತ್​ ಗೋರ್ಪಡೆ, ಪ್ರಸನ್ನ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net