ಹುಬ್ಬಳ್ಳಿ: ಸಹಕಾರ ಸಂಘಗಳ ಮೂಲಕ ಸ್ವಾವಲಂಬಿ, ಸಮೃದ್ಧಿ, ಸ್ವಾಭಿಮಾನದ ರಾಷ್ಟವಾಗಿ ಭಾರತ ದೇಶ ಹೊರಹೊಮ್ಮಲಿದೆ. ಇದ್ದಕ್ಕಾಗಿ ದೇಶದಾದ್ಯಂತ ಚಳುವಳಿಗಳು ನಡೆದಿವೆ ಎಂದು ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿಯಮಿತ, ಧಾರವಾಡ ಜಿಲ್ಲಾ ಸಹಕಾರ ಯೂನಿಯನ್, ಕೆಸಿಸಿ ಬ್ಯಾಂಕ್,
ಹುಬ್ಬಳ್ಳಿ ತಾಲೂಕಿನ ಎಲ್ಲ ಸಹಕಾರ ಸಂಘಗಳು ಹಾಗೂ ಧಾರವಾಡ ಜಿಲ್ಲಾ ಸಹಕಾರ ಇಲಾಖೆ ಆಶ್ರಯದಲ್ಲಿ
ಇಲ್ಲಿಯ ಜೆ.ಸಿ. ನಗರದ ಮುನ್ಸಿಪಲ್ ನೌಕರರ ಭವನದಲ್ಲಿ ಬುಧವಾರ ಏರ್ಪಡಿಸಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಿಕಾರ್ಜುನ ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಉಮೇಶ ಹೆಬಸೂರ ಅಧ್ಯಕ್ಷತೆ ವಹಿಸಿದ್ದರು.
ಸಹಕಾರ ರತ್ನ ಪುರಸ್ಕೃತ, ಉತ್ತಮ ಸಹಕಾರ ಸಂಸ್ಥೆಯಇತರರನ್ನುಸನ್ಮಾನಿಸಲಾಯಿತು.
ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಉಪಾಧ್ಯಕ್ಷ ನಿಂಗನಗೌಡ ಮರಿಗೌಡ್ರ, ಕಾಸ್ಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಉಳವಪ್ಪ ದಾಸನೂರ, ಸಹಕಾರ ಮಹಾಮಂಡಳ ರಾಜ್ಯ ನಿರ್ದೇಶಕ ಸುರೇಶ ಬಣವಿ, ಬಂಗಾರೇಶ ಹಿರೇಮಠ, ವಿಕ್ರಮ ಶಿರೂರ, ಮಲ್ಲಿಕಾರ್ಜುನ ಸಾವಕಾರ, ಹಿತೇಶಕುಮಾರ ಮೋದಿ, ಇತರರು ಇದ್ದರು.
ನೂಲ್ವಿ ಪಿಕೆಪಿಎಸ್ ವ್ಯವಸ್ಥಾಪಕ ಕಲ್ಲನಗೌಡ ಮೂಗಣ್ಣವರ್ ನಿರೂಪಿಸಿದರು.