ಪೊಲೀಸ್ ಆಯುಕ್ತ, ಎಸ್ಪಿ ಗುಂಜನ್ ಆರ್ಯಗೆ ಡಿಜಿ- ಐಜಿಪಿ ಪ್ರಶಂಸಾ ಪ್ರಶಸ್ತಿ

N. Shasikumar and Gunjan Arya
N. Shasikumar and Gunjan Arya
Published on
ಧಾರವಾಡ: ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಸೇರಿ 6 ಅಧಿಕಾರಿ- ಸಿಬ್ಬಂದಿ 2025- 26ನೇ ಸಾಲಿನ ಡಿಜಿ- ಐಜಿಪಿ ಪ್ರಶಂಸಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶಾಂತಿ ಸುವ್ಯವಸ್ಥೆ ಕಾಪಾಡುವುದು, ಅಪರಾಧ ಪ್ರಕರಣಗಳ ಪ್ರಕರಣಗಳ ಪತ್ತೆ ಮತ್ತು ದಕ್ಷ ಆಡಳಿತವನ್ನು ಪರಿಗಣಿಸಿ ಇಬ್ಬರೂ ಅಧಿಕಾರಿಗಳಿಗೆ ಪ್ರಶಸ್ತಿ ಲಭಿಸಿದೆ.
ಇದೇವೇಳೆ ಜಿಲ್ಲಾ ಕಂಟ್ರೋಲ್ ರೂಂನ ಪಿಎಸ್‌‌ಐ (ವೈರ್‌ಲೆಸ್) ಮಲ್ಲಿಕಾರ್ಜುನ ನರಗುಂದ ಮತ್ತು ಧಾರವಾಡ ಗ್ರಾಮೀಣ ಠಾಣೆಯ ಎಎಸ್‌ಐ ಶ್ರೀಶೈಲ ಕಾಜಗಾರ , ಪೊಲೀಸ್ ತರಬೇತಿ ಶಾಲೆಯ (ಪಿಟಿಎಸ್) ರಿಸರ್ವ್ ಹೆಡ್ ಕಾನ್‌ಸ್ಟೇಬಲ್ ರಾಘವೇಂದ್ರ ಅಗ್ರವಾಲೆ ಮತ್ತು ಹುಧಾ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಕಾನ್‌ಸ್ಟೇಬಲ್ ಸಿದ್ರಾಮೇಶ್ವರ ಘಟನಟ್ಟಿ ಕೂಡ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net