ಹಾಸ್ಯ ನಾಟಕ ಪ್ರದರ್ಶನ ಇಂದಿನಿಂದ drama

drama
drama
Published on

ಪ್ರಮುಖ ಮುಖ್ಯಾಂಶಗಳು

  • ಪ್ರೇಕ್ಷಕರು ನಾಟಕಗಳನ್ನು ವೀಕ್ಷಿಸಿ, ಪ್ರೋತ್ಸಾಹಿಸಬೇಕು
  • ಹಾಸ್ಯದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ
  • ‘ಎಲ್ಲಿ ಅದಿ ಮಲ್ಯಾ’ ಎಂಬ ಹಾಸ್ಯ ನಾಟಕದ ಪ್ರದರ್ಶನ.
ಹುಬ್ಬಳ್ಳಿ:
ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಮನಸೂರಿನ ಶ್ರೀ ಬಸವರಾಜ ದೇವರು ವಹಿಸಲಿದ್ದು, ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಉಮೇಶ ಚಿಕ್ಕಮಠ ಉದ್ಘಾಟಿಸುವರು ಎಂದರು.
ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಅತಿಥಿಯಾಗಿದ್ದು, ಮಾಜಿ ಎಂಎಲ್​ಸಿ ಮೋಹನ ಲಿಂಬಿಕಾಯಿ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
ಹಾಸ್ಯದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸವನ್ನು ಕಂಪನಿ ಯಶಸ್ವಿಯಾಗಿ ಮಾಡುತ್ತಿದೆ. ಪ್ರೇಕ್ಷಕರು ನಾಟಕಗಳನ್ನು ವೀಕ್ಷಿಸಿ, ವೃತ್ತಿ ನಾಟಕ ಕಂಪನಿಗಳು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಅವರು ಮನವಿ ಮಾಡಿದರು.
ಒಂದು ಕಾಲದಲ್ಲಿ ಕರ್ನಾಟಕದಲ್ಲಿ 80ಕ್ಕೂ ಹೆಚ್ಚು ವೃತ್ತಿ ನಾಟಕ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ, ಇಂದಿನ ದಿನಗಳಲ್ಲಿ ಕೇವಲ 12ರಿಂದ 14 ಕಂಪನಿಗಳು ಉಳಿದಿವೆ ಎಂದರು.
ಸ್ನೇಹದ ಸಂದೇಶ ಸಾರುವ ಈ ನಾಟಕ ಮಧ್ಯಾಹ್ನ 2.45 ಹಾಗೂ ಸಂಜೆ 6 ಗಂಟೆಗೆ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.
ನಾಟಕ ಕಂಪನಿ ಸಂಸ್ಥಾಪಕಿ ಮಮತಾಶ್ರೀ ಅರಳಿಹಳ್ಳಿ, ಕುಮಾರ ಅರಳಿಹಳ್ಳಿ ಹಾಗೂ ಇತರರು ಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net