college parliament ಪ್ರತಿಭೆ ಗುರುತಿಸಲು ನಾಯಕತ್ವ ಬೆಳೆಸಲು ಪೂರಕ
college parliament ಹುಬ್ಬಳ್ಳಿಯ ಡಾ. ಆರ್.ಬಿ. ಪಾಟೀಲ್ ಮಹೇಶ ಪಿಯು ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ ಹಾಗೂ ಬ್ಯಾಡ್ಜ್ ವಿತರಣೆ ಸಮಾರಂಭ ನಡೆಯಿತು. ವಿಜಯಕುಮಾರ ಪಾಟೀಲಕುಲಕರ್ಣಿ, ರಮೇಶ ಹೊಂಬಾಳಿ, ಟಿ. ಧೀರಜ್, ಸುನಿಧಿ ಅರ್ಕಸಾಲಿ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಹೇಶ ಕಾಲೇಜಿನ ವಿದ್ಯಾರ್ಥಿ ಸಂಸತ್ ಉದ್ಘಾಟನೆ
ಟಿ. ಧೀರಜ್ ಮತ್ತು ಸುನಿಧಿ ಅರ್ಕಸಾಲಿ ಅಧ್ಯಕ್ಷರು
ಹುಬ್ಬಳ್ಳಿ: college parliament ನಗರದ ಡಾ. ಆರ್.ಬಿ. ಪಾಟೀಲ್ ಮಹೇಶ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ ಮತ್ತು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ವಿತರಣೆ ಮಾಡಲಾಯಿತು.
ವಿದ್ಯಾರ್ಥಿ ಸಂಸತ್ತಿನ ಬಾಲಕರ ವಿಭಾಗದ ಟಿ. ಧೀರಜ್ ಮತ್ತು ವಿದ್ಯಾಥಿರ್ನಿಯರ ವಿಭಾಗದಿಂದ ಸುನಿಧಿ ಅರ್ಕಸಾಲಿ ಅಧ್ಯಕ್ಷರಾಗಿ ಆಯ್ಕೆಯಾದರು. ಕ್ರೀಡೆ, ಸಾಹಿತ್ಯಿಕ, ಪರಿಸರ ಮತ್ತು ವಿದ್ಯಾರ್ಥಿ ಸಂಘಟನೆ ಮತ್ತು ಪ್ರತಿ ಕ್ಲಾಸ್ನ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ವಿತರಣೆ ಸಮಾರಂಭದಲ್ಲಿ ಅತಿಥಿಗಳಾಗಿದ್ದ ಎನ್.ಎಲ್.ಇ. ಸಂಸ್ಥೆಯ ಶೈಕ್ಷಣಿಕ ಸಂಯೋಜಕ ವಿಜಯಕುಮಾರ ಪಾಟೀಲಕುಲಕರ್ಣಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಲು ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ತುಂಬಾ ಪೂರಕವಾಗಿವೆ ಮತ್ತು ವಿದ್ಯಾರ್ಥಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ರಮೇಶ ಹೊಂಬಾಳಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮನ್ನು ತಾವು ಗುರುತಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಒಳ್ಳೆಯ ವೇದಿಕೆ ಮತ್ತು ಇಲ್ಲಿನ ಶಿಸ್ತು ತುಂಬಾ ಅಚ್ಚುಕಟ್ಟಾಗಿದೆ. ಕಾಲೇಜು ವಿದ್ಯಾರ್ಥಿ ಸ್ನೇಹಿ ವಾತಾವರಣ ಹೊಂದಿದೆ ಎಂದು ಹೇಳಿದರು.