ಬುರುಡೆ ಗ್ಯಾಂಗ್​ಗೆ ಸಿಎಂ (CM) ಕೃಪಾಕಟಾಕ್ಷ

Belagavi MP Spoke about CM
Belagavi MP Spoke about CM
Published on

ಪ್ರಮುಖ ಮುಖ್ಯಾಂಶಗಳು

  • ಧರ್ಮಸ್ಥಳದ ವಿಚಾರದಲ್ಲಿ ಸಾಕಷ್ಟು ಅಪಪ್ರಚಾರ ನಡೆಯಿತು.
  • ಯಾರೊಬ್ಬರನ್ನೂ ಏಕೆ ಬಂಧಿಸಿಲ್ಲ ?
  • ಆರೋಪ ಪಟ್ಟಿ ಸಲ್ಲಿಸಿರುವ ಎಸ್​ಐಟಿ
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ವಿಚಾರದಲ್ಲಿ ಸಾಕಷ್ಟು ಅಪಪ್ರಚಾರ ನಡೆಯಿತು. ಸದ್ಯ ಎಸ್​ಐಟಿ ಆರೋಪ ಪಟ್ಟಿ ಸಲ್ಲಿಸಿದೆ. ಆದರೆ, ಯಾರನ್ನೂ ಬಂಧಿಸಿಲ್ಲ ಎಂದರು.
ಸಮಾಜವಾದಿ, ಎಡ ಪಂಥೀಯ ಗ್ಯಾಂಗ್ ಪ್ರಚೋದನೆಯಿಂದ ಎಸ್​ಐಟಿ ರಚನೆಯಾಯಿತು. ಯಾವುದೇ ಸಾಕ್ಷಿ, ಪುರಾವೆ ಇಲ್ಲದೆಯೇ ಧರ್ಮಸ್ಥಳದ ಅಪಪ್ರಚಾರಕ್ಕೆಂದೇ ಎಸ್​ಐಟಿ ರಚಿಸಲಾಯಿತು ಎಂದು ದೂರಿದರು.
ಆರೋಪ ಪಟ್ಟಿ ಸಲ್ಲಿಸಿರುವ ಎಸ್​ಐಟಿ ಕೆಲವರು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದೆ. ಆದರೆ, ಇದುವರೆಗೆ ಯಾರೊಬ್ಬರನ್ನೂ ಏಕೆ ಬಂಧಿಸಿಲ್ಲ ? ಎಂದು ಶೆಟ್ಟರ್ ಪ್ರಶ್ನಿಸಿದರು.
ಬುರುಡೆ ಗ್ಯಾಂಗ್​ಗೆ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸರ್ಕಾರದ ಆಶೀರ್ವಾದ ಇರುವ ಕಾರಣದಿಂದ ಇದುವರೆಗೆ ಯಾರೊಬ್ಬರನ್ನೂ ಬಂಧಿಸಿಲ್ಲ. ಇನ್ನಾದರೂ ನಿಜವಾದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net