ಧಾರವಾಡ: ನಗರದ ತಪೋವನ ಬಳಿಯ ಕ್ಲಾಸಿಕ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ವಿದ್ಯಾಥಿರ್ಗಳು ಐಸಿಎಸ್ಇ
ಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಸಮರ್ಥ ಸೊಗಲಮಠ ಶೇ. 96.40 ಶಾಲೆಗೆ ಪ್ರಥಮ, ಅಂಕುರ ತಿವಾರಿ ಶೇ. 94.60 ದ್ವೀತಿಯ, ನವ್ಯಾ ಮಟ್ಟಿ ಶೇ. 94.20 ತೃತೀಯ ಸ್ಥಾನ ಪಡೆದಿದ್ದಾಳೆ. ಮೇಧಾ ಹಿರೇಮಠ ಶೇ. 91.60, ಅಫ್ಸೀನ್ ಕಿತ್ತೂರ ಶೇ. 91.20, ವನಿಷಾ ಘಾಟಗೆ ಶೇ. 91.20, ಮಾನಸಾ ಪೂಜಾರ ಶೇ. 90.80, ಹೃದಯ ಹುನ್ನೂರ ಶೇ. 90.20 ಅಂಕ ಗಳಿಸಿದ್ದಾರೆ. ವಿದ್ಯಾಥಿರ್ಗಳನ್ನು ಕ್ಲಾಸಿಕ್ ಸಮೂಹ ಸಂಸ್ಥೆಗಳ ನಿರ್ದೇಶಕ
ಎಸ್. ಉಪ್ಪಾರ, ಪ್ರಾಚಾರ್ಯ ಮನೋಹರ ಕೆಂಚರಾಹುತ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.