civil engineers ಹುಬ್ಬಳ್ಳಿಯಲ್ಲಿ ರಾಜ್ಯಸಭಾ ಸದಸ್ಯ ಪ್ರೊ. ಎಂ. ನಾಗರಾಜ ಅವರನ್ನು ಸಿವಿಲ್ ಇಂಜಿನಿಯರ್ಸ್ ಸಂಘದಿಂದ ಸನ್ಮಾನಿಸಲಾಯಿತು. ಸುರೇಶ ಕಿರೇಸೂರ, ಎಂ.ಎ. ಕಾಟೇವಾಡಿ, ಡಾ. ಎಂ.ಆರ್. ಪಾಟೀಲ, ಶ್ರೀಕಾಂತ ಕಬಾಡಿ ಇತರರು ಇದ್ದರು.
Published on:
Copied
Follow Us
ಹುಬ್ಬಳ್ಳಿ: civil engineers ರಾಜ್ಯಸಭಾ ಸದಸ್ಯ ಪ್ರೊ. ಎಂ. ನಾಗರಾಜ ಅವರನ್ನು ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ವತಿಯಿಂದ ನಗರದಲ್ಲಿ ಸನ್ಮಾನಿಸಲಾಯಿತು.
ಸಂಘದ ಸದಸ್ಯರೂ ಆಗಿರುವ ಎಂ. ನಾಗರಾಜ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಸಿವಿಲ್ ಇಂಜಿನಿಯರ್ಸ್ ವೃತ್ತಿಗಾಗಿ ಬಲಿಷ್ಠ ಚೌಕಟ್ಟು ಅಗತ್ಯ. ಇದಕ್ಕಾಗಿ ದೇಶಾದ್ಯಂತ ಇರುವ ವೃತ್ತಿ ಬಾಂಧವರ ಹಿತ ಕಾಯಲು ಮಸೂದೆ ತರುವ ದಿಸೆಯಲ್ಲಿ ಕೇಂದ್ರ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ನಿರ್ಮಾಣ ಹಂತದಲ್ಲಿ ಸುರಕ್ಷತೆ, ಭದ್ರತೆ, ಸುಸ್ಥಿರತೆ, ವೃತ್ತಿಪರ ನೈತಿಕತೆ ಬೆಳೆಯಬೇಕಾಗಿದೆ ಎಂದ ಅವರು, ವಿಶ್ವೇಶ್ವರಯ್ಯ ಭವನ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.
ಸಂಘದ ಮಾಜಿ ಅಧ್ಯಕ್ಷ, ಐಸಿಐ ಚೇರ್ಮನ್ ಸುರೇಶ ಕಿರೇಸೂರ, ಕಾರ್ಯದರ್ಶಿ ಎಂ.ಎ. ಕಾಟೇವಾಡಿ, ಡಾ. ಎಂ.ಆರ್. ಪಾಟೀಲ, ಶ್ರೀಕಾಂತ ಕಬಾಡಿ, ರಶ್ಮೀ, ಜಿ.ಎಸ್. ಅಂಗಡಿ, ಶಶಿಕಾಂತ ಕನ್ನೂರು, ಕನಕಗೇರಿ, ರಟಗಲ್ ಇತರರು ಇದ್ದರು.