chitaguppi ಮುಂಬೈ ಮಾದರಿಯಲ್ಲಿ ಪುನರ್ವಸತಿ ಕೇಂದ್ರ ಸ್ಥಾಪನೆ ಚಿಂತನೆ
ಹುಬ್ಬಳ್ಳಿಯ ಚಿಟಗುಪ್ಪಿ chitaguppi ಆಸ್ಪತ್ರೆಯಲ್ಲಿ ಆರಂಭಿಸಿರುವ ಉಚಿತ ಫಿಜಿಯೋಥೆರಪಿ ಕೇಂದ್ರದ ಎರಡನೇ ವಾರ್ಷಿಕೋತ್ಸವ ಸಮಾರಂಭವನ್ನು ಡಾ. ಶ್ರೀಧರ ದಂಡಪ್ಪನವರ ಬುಧವಾರ ಉದ್ಘಾಟಿಸಿದರು.
Published on:
Copied
Follow Us
ಹುಬ್ಬಳ್ಳಿ: ಮುಂಬೈನಲ್ಲಿ ಪುನರ್ವಸತಿ ಕೇಂದ್ರವೊಂದನ್ನು chitaguppi ನಾನು ಗಮನಿಸಿದ್ದೇನೆ. ಅಲ್ಲಿ ವಿವಿಧ ವಿಭಾಗಗಳಿವೆ. ಅದೇ ಮಾದರಿಯನ್ನು ಹುಬ್ಬಳ್ಳಿಯಲ್ಲಿ ನಿರ್ಮಿಸುವ ಕುರಿತು ತಜ್ಞರೊಂದಿಗೆ ಚರ್ಚಿಸಿ ತೀರ್ಮಾನಿಸುವ ಚಿಂತನೆ ನಡೆದಿದೆ ಎಂದು ಮಜೇಥಿಯಾ ಫೌಂಡೇಷನ್ ಚೇರ್ಮನ್ ಡಾ. ಜಿತೇಂದ್ರ ಮಜೇಥಿಯಾ ಅಭಿಪ್ರಾಯಪಟ್ಟರು.
ಇಲ್ಲಿಯ ಹು-ಧಾ ಮಹಾನಗರ ಪಾಲಿಕೆ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಆರಂಭಿಸಿರುವ ಮಜೇಥಿಯಾ ಫೌಂಡೇಷನ್‌ನ ಉಚಿತ ಫಿಜಿಯೋಥೆರಪಿ ಕೇಂದ್ರದ ಎರಡನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಫಿಜಿಯೋಥೆರಪಿ ಆರಂಭಿಸುವ ಕುರಿತು ಮುಖ್ಯವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ ಅವರನ್ನು ಕೇಳಿಕೊಂಡಾಗ ಒಪ್ಪಿಗೆ ಸೂಚಿಸಿದರು. ಅದರಂತೆಯೇ ಈಗ ಕಾರ್ಯಾರಂಭ ಮಾಡಿದ್ದು, ಬಹಳಷ್ಟು ಜನರು ಇದರ ಉಪಯೋಗ ಪಡೆದಿದ್ದಾರೆ ಎಂದು ಶ್ಲಾಘಿಸಿದರು.
ಚಿಟಗುಪ್ಪಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ ಉದ್ಘಾಟಿಸಿ ಮಾತನಾಡಿ, 2 ವರ್ಷದ ಹಿಂದೆ ಫಿಜಿಯೋಥೆರಪಿ ಕೇಂದ್ರ ಆರಂಭಿಸಲಾಗಿದೆ. ಬಹಳಷ್ಟು ಜನರು ಇದರ ಸದುಪಯೋಗ ಪಡೆದಿದ್ದಾರೆ. ಪುನರ್ವಸತಿ ಕೇಂದ್ರ ಸ್ಥಾಪನೆ ಬಗ್ಗೆಯೂ ಡಾ. ಜಿತೇಂದ್ರ ಮಜೇಥಿಯಾ ಅವರ ಜತೆಗೆ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಆರಂಭಿಸುವ ಭರವಸೆ ನೀಡಿದ್ದಾರೆ ಎಂದರು.
ಫೌಂಡೇಷನ್ ಅಧ್ಯಕ್ಷೆ ನಂದಿನಿ ಮಜೇಥಿಯಾ, ಕಶ್ಯಪ ಮಜೇಥಿಯಾ, ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಸಿಇಒ ಡಾ. ಸುನೀಲಕುಮಾರ ಕುಕನೂರ, ಟ್ರಸ್ಟಿಗಳಾದ ಡಾ.ಕೆ. ರಮೇಶಬಾಬು, ಎಚ್.ಆರ್. ಪ್ರಹ್ಲಾದರಾವ್, ಅಮೃತಲಾಲ್ ಪಟೇಲ್, ಡಾ. ನಾಗರಾಜ ರಾವ್ ಸಾನು, ಡಾ. ಕವಿತಾ ಮೋಹರೆ ಇತರರಿದ್ದರು.