chitaguppi hospital ವೈದ್ಯರ ಕಾರ್ಯ ಶ್ಲಾಘನೀಯ

ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಗೆ chitaguppi hospital ಡಯಾಲಿಸಿಸ್ ಯಂತ್ರ ದೇಣಿಗೆ ನೀಡಿದ ಎಸ್.ಸಿ. ಶೆಟ್ಟರ್ ಆ್ಯಂಡ್ ಸನ್ಸ್ ಕಂಪನಿ ಮುಖ್ಯಸ್ಥ ವಿಜಯ ಶೆಟ್ಟರ್ ಅವರನ್ನು ಶಾಸಕ ಪ್ರಸಾದ ಅಬ್ಬಯ್ಯ ಅವರು ಶನಿವಾರ ಸನ್ಮಾನಿಸಿದರು.
ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಗೆ chitaguppi hospital ಡಯಾಲಿಸಿಸ್ ಯಂತ್ರ ದೇಣಿಗೆ ನೀಡಿದ ಎಸ್.ಸಿ. ಶೆಟ್ಟರ್ ಆ್ಯಂಡ್ ಸನ್ಸ್ ಕಂಪನಿ ಮುಖ್ಯಸ್ಥ ವಿಜಯ ಶೆಟ್ಟರ್ ಅವರನ್ನು ಶಾಸಕ ಪ್ರಸಾದ ಅಬ್ಬಯ್ಯ ಅವರು ಶನಿವಾರ ಸನ್ಮಾನಿಸಿದರು.
Published on
ಹುಬ್ಬಳ್ಳಿ: ಎಸ್.ಸಿ. ಶೆಟ್ಟರ್ ಆ್ಯಂಡ್ ಸನ್ಸ್ ಪ್ರೈ.ಲಿಮಿಟೆಡ್ ವತಿಯಿಂದ ಇಲ್ಲಿಯ ಚಿಟಗುಪ್ಪಿ ಆಸ್ಪತ್ರೆಗೆ chitaguppi hospital ಡಯಾಲಿಸಿಸ್ ಯಂತ್ರಗಳನ್ನು ಶನಿವಾರ ಹಸ್ತಾಂತರ ಮಾಡಲಾಯಿತು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಆಸ್ಪತ್ರೆಯತ್ತ ರೋಗಿಗಳು ಮತ್ತವರ ಸಂಬಂಧಿಕರು ಮುಖ ಮಾಡುವಂತೆ ನೋಡಿಕೊಳ್ಳುವುದು ವೈದ್ಯರ ಕರ್ತವ್ಯ. ಈ ನಿಟ್ಟಿನಲ್ಲಿ ಡಾ. ಶ್ರೀಧರ ದಂಡಪ್ಪನವರು ಮಾಡುತ್ತಿದ್ದಾರೆ. ಆಸ್ಪತ್ರೆಯ ಸ್ವಚ್ಛತೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದಾರೆ. ಸಿಎಸ್‌ಆರ್ ಅನುದಾನದಲ್ಲಿ ವಿಜಯ ಶೆಟ್ಟರ್ ಅವರು ಡಯಾಲಿಸಿಸ್ ಯಂತ್ರವನ್ನು ಆಸ್ಪತ್ರೆಗೆ ನೀಡಿರುವುದು ಕೂಡ ಅವರ ಬಡವರ ಪರ ಕಾಳಜಿಯನ್ನು ತೋರಿಸುತ್ತದೆ ಎಂದು ಶ್ಲಾಘಿಸಿದರು.
ಡಯಾಲಿಸಿಸ್ ಯಂತ್ರ ದೇಣಿಗೆ ನೀಡಿದ ಎಸ್.ಸಿ. ಶೆಟ್ಟರ್ ಆ್ಯಂಡ್ ಸನ್ಸ್ ಕಂಪನಿ ಮುಖ್ಯಸ್ಥ ವಿಜಯ ಶೆಟ್ಟರ್ ಹಾಗೂ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ ಅವರನ್ನು ಸಚಿವರ ಸನ್ಮಾನಿಸಿದರು.
ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ರಾಜ್ಯಸಭಾ ಸದಸ್ಯ ಪ್ರೊ. ಮಾ. ನಾಗರಾಜ, ಎಂಎಲ್‌ಸಿಗಳಾದ ಎಫ್.ಎಚ್. ಜಕ್ಕಪ್ಪನವರ, ಪ್ರದೀಪ ಶೆಟ್ಟರ್, ಲಿಂಗರಾಜ ಪಾಟೀಲ, ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಇಮ್ರಾನ್ ಯಲಿಗಾರ, ಮಜೇಥಿಯಾ ಫೌಂಡೇಷನ್ ಚೇರ್ಮನ್ ಡಾ. ಜಿತೇಂದ್ರ ಮಜೇಥಿಯಾ, ಮಹೇಂದ್ರ ಸಿಂಘಿ, ಡಾ. ಶ್ರೀಧರ ದಂಡಪ್ಪನವರ, ವಿಜಯ ಶೆಟ್ಟರ್, ನಿಖಿಲ್ ಶೆಟ್ಟರ್, ಅಮರೇಶ ಹಿಪ್ಪರಗಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net