chetan school ಚೇತನ ಬಿ ಸ್ಕೂಲ್​ನಲ್ಲಿ ಪದವಿ ಪ್ರದಾನ

chetan school ಹುಬ್ಬಳ್ಳಿಯ ಚೇತನ ಬಿ ಸ್ಕೂಲ್​ನಲ್ಲಿ ಪದವಿ ಪ್ರಮಾಣ ಪತ್ರ ವಿತರಣೆ ಸಮಾರಂಭವನ್ನು ಧಾರವಾಡ ಐಐಟಿ ಡೀನ್​ ಪ್ರೊ. ಶಿವಪ್ರಸಾದ ಉದ್ಘಾಟಿಸಿದರು. ಡಾ. ಶ್ರೀನಿವಾಸ ಜೋಶಿ, ಡಾ. ವಿ.ಎಂ. ಕೊರವಿ, ರಾಜಣ್ಣ ಕೊರವಿ, ಎ.ಎಚ್​. ಚಚಡಿ ಇತರರು ಇದ್ದರು.
chetan school ಹುಬ್ಬಳ್ಳಿಯ ಚೇತನ ಬಿ ಸ್ಕೂಲ್​ನಲ್ಲಿ ಪದವಿ ಪ್ರಮಾಣ ಪತ್ರ ವಿತರಣೆ ಸಮಾರಂಭವನ್ನು ಧಾರವಾಡ ಐಐಟಿ ಡೀನ್​ ಪ್ರೊ. ಶಿವಪ್ರಸಾದ ಉದ್ಘಾಟಿಸಿದರು. ಡಾ. ಶ್ರೀನಿವಾಸ ಜೋಶಿ, ಡಾ. ವಿ.ಎಂ. ಕೊರವಿ, ರಾಜಣ್ಣ ಕೊರವಿ, ಎ.ಎಚ್​. ಚಚಡಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಲಿಯುವಾಗ ನಾಚಿಕೆ ಇರಬಾರದು
  • ಐಐಟಿ ಡೀನ್​ ಪ್ರೊ. ಶಿವಪ್ರಸಾದ ಸಲಹೆ
ಹುಬ್ಬಳ್ಳಿ: chetan school ತಂತ್ರಜ್ಞಾನ ಕ್ರಾಂತಿಯಿಂದ ಜಗತ್ತು ತೀವ್ರ ಗತಿಯಲ್ಲಿ ಬದಲಾಗುತ್ತಿದೆ. ನ್ಯಾನೋ, ಬಯೋ ಹಾಗೂ ಕೃತಕ ಬುದ್ದಿಮತ್ತೆ (ಎಐ) ತಂತ್ರಜ್ಞಾನದಿಂದ ಮುಂದಿನ 10 -15 ವರ್ಷಗಳಲ್ಲಿ ದೊಡ್ಡ -ಅವಕಾಶಗಳು ಸೃಷ್ಟಿಯಾಗಲಿದ್ದು, ಯುವಶಕ್ತಿ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಜ್ಜಾಗಬೇಕಿದೆ ಎಂದು ಧಾರವಾಡ ಐಐಟಿ ಡೀನ್​ ಪ್ರೊ. ಶಿವಪ್ರಸಾದ ಹೇಳಿದರು.
ಇಲ್ಲಿನ ಚೇತನ ಬಿ ಸ್ಕೂಲ್​ನಲ್ಲಿ ಏರ್ಪಡಿಸಿದ್ದ ಎಂಬಿಎ ವಿದ್ಯಾರ್ಥಿಗಳ ಪದವಿ ಪ್ರಮಾಣ ಹಾಗೂ ವಿವಿಧ ಕಂಪೆನಿಗಳಲ್ಲಿ ನೇಮಕಗೊಂಡ ವಿದ್ಯಾರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ಜ್ಞಾನ ಬಂದರೆ ಆತಂಕ ದೂರವಾಗಲಿದೆ. ವಿದ್ಯಾರ್ಥಿಗಳು ಇದನ್ನು ಅಳವಡಿಸಿಕೊಳ್ಳಬೇಕು. ದೊಡ್ಡ ಕನಸು ಕಾಣಬೇಕು. ಸಾಕಾರಕ್ಕೆ ಬೆನ್ನು ಬಿದ್ದು ಪರಿಶ್ರಮದಿಂದ ಮುಂದುವರಿಯಬೇಕು. ಕಲಿಯುವಾಗ ಯಾವುದೇ ನಾಚಿಕೆ ಇರಬಾರದು. ಆಗಲೇ ಯಶಸ್ಸಿನ ಹಾದಿ ಹಿಡಿಯಲು ಸಾಧ್ಯ ಎಂದರು.
ನೇತ್ರತಜ್ಞ ಡಾ. ಶ್ರೀನಿವಾಸ ಜೋಶಿ ಮಾತನಾಡಿ, ಒಂದು ಅಥವಾ ಹಲವು ವೈಫಲ್ಯಗಳೇ ಜೀವನದ ಅಂತ್ಯವಲ್ಲ. ಬದಲಾಗಿ ಅವು ಹೊಸ ಅವಕಾಶ, ಯಶಸ್ಸಿಗೆ ದಾರಿ ಎಂಬುದನ್ನು ಅರಿಯಬೇಕು. ಒತ್ತಡ, ದುಶ್ಚಟಕ್ಕೆ ಜೀವನ ಬಲಿಯಾಗದಿರಲಿ ಎಂದರು.
2024ರಲ್ಲಿ 85 ಜನರು ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ ಉದ್ಯೋಗಕ್ಕಾಗಿ 67 ಜನರಿಗೆ ನೇಮಕಾತಿ ಪತ್ರ ನೀಡಲಾಯಿತು. ಚೇತನ ಬಿ ಸ್ಕೂಲ್​ ನಿರ್ದೇಶಕ ಡಾ. ಎಂ.ವಿ. ಕೊರವಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎ.ಎಚ್​. ಚಚಡಿ, ಪ್ರೊ. ಅರುಣ ರಜಪೂತ, ರಾಜಣ್ಣ ಕೊರವಿ, ಮುರುಗೇಶ ಎಸ್​., ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net