cheatedಲಾಭ ಆಸೆಗೆ 20.65 ಲಕ್ಷ ರೂ. ಮೋಸ

 ಹೂಡಿಕೆ ಆಮಿಷ
ಹೂಡಿಕೆ ಆಮಿಷ
Published on
ಹುಬ್ಬಳ್ಳಿ: ಹೂಡಿಕೆ ಆಮಿಷಕ್ಕೆ (cheated) ಬಲಿಯಾದ ನಗರದ ಅಶೋಕ ರಾಡಿಯಾ ಎಂಬುವವರು 20.65 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಅಶೋಕ ಅವರನ್ನು ವಾಟ್ಸ್‌ಆ್ಯಪ್‌ನಲ್ಲಿ ಸಂಪರ್ಕಿಸಿದ ಇಬ್ಬರು, 20.65 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಅಶೋಕ ಅವರ ಸಂಖ್ಯೆಯನ್ನು ಮುಖೇಶ ಎಂಬಾತ ವಿಐಪಿ-1 ಸರ್ವಿಸ್ ಟೀಮ್ ಹೆಸರಿನ ವಾಟ್ಸ್ ಆ್ಯಪ್ ಗ್ರೂಪ್‌ಗೆ ಸೇರ್ಪಡೆಗೊಳಿಸಿ, ರುಡ್‌ಪ್ರೊ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಹೇಳಿದ್ದಾರೆ. ಹಣ ಹೂಡಿಕೆ ಬಗ್ಗೆ ತಿಳಿಸಿ, ನಂತರ ಅವರಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net