

ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿ
(chariot festival)
ಅವರ 97ನೇ ಪುಣ್ಯಾರಾಧನೆಯ ನಿಮಿತ್ತ ಇಲ್ಲಿಯ ಪ್ರಸಿದ್ಧ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿರುವ ಪುಷ್ಕರಣಿಯಲ್ಲಿ ಆ.29 ರಂದು ಸಂಜೆ 5.30ಕ್ಕೆ ಜಲ ರಥೋತ್ಸವ (ತೆಪ್ಪೋತ್ಸವ) ನೆರವೇರಲಿದೆ ಎಂದು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿ ಚೇರ್ಮನ್ ಬಾಳು ಮಗಜಿಕೊಂಡಿ ತಿಳಿಸಿದರು.
ದಾನ ರೂಪದಲ್ಲಿ ಗುಣಮಟ್ಟದ ಅಕ್ಕಿ, ದವಸ ಧಾನ್ಯಗಳನ್ನೇ ಕೊಡಬೇಕೆಂದು ಭಕ್ತರಿಗೆ ಒತ್ತಾಯ ಮಾಡಿಲ್ಲ. ರೇಷನ್ ಅಕ್ಕಿ (ನ್ಯಾಯ ಬೆಲೆ ಅಂಗಡಿ) ಕೊಟ್ಟರೂ ಸ್ವೀಕರಿಸುತ್ತೇವೆ. ಆದರೆ, ರೇಷನ್ ಅಕ್ಕಿಯನ್ನು ಅನ್ನ ದಾಸೋಹಕ್ಕೆ ಬಳಸುವುದಿಲ್ಲ. ಎಪಿಎಂಸಿಯಲ್ಲಿ ಹರಾಜು ಮೂಲಕ ವಿಲೇವಾರಿ ಮಾಡಿ ಬಂದ ಹಣವನ್ನು ಅನ್ನ ದಾಸೋಹದ ಖರ್ಚು-ವೆಚ್ಚಕ್ಕೆ ಬಳಸಿಕೊಳ್ಳುತ್ತೇವೆ ಎಂದು ಬಾಳು ಮಗಜಿಕೊಂಡಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.