ಅಣ್ಣಿಗೇರಿ: ತಾವೆಲ್ಲರೂ ‘ಓಂ ನಮಃ ಶಿವಾಯ’ Om Namah Shivaya' ನಾಮ ಜಪಿಸುವ ಮೂಲಕ ಮನಸಿಗೆ ಶಾಂತಿ, ನೆಮ್ಮದಿ ಪಡೆಯಬೇಕು ಎಂದು ಮಲ್ಲಸಮುದ್ರದ ಫಕೀರ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಪಟ್ಟಣದ ರಾಜಯೋಗಿ ತೋಟಪ್ಪ ದೇಸಾಯಿಯವರ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ್ದ ರುದ್ರಮುನೀಶ್ವರ ದಾಸೋಹ ಮಠದ ಲಿಂ. ರುದ್ರಮುನೀಶ್ವರ ಶ್ರೀಗಳ 62ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಅಡ್ನೂರ-ರಾಜೂರು-ಗದಗ ಬ್ರಹನ್ಮಠದ ಅಭಿನವ ಪಂಚಾಕ್ಷರ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಹುಚ್ಚಿರೇಶ್ವರ ಮಠದ ಷಣ್ಮುಖಪ್ಪಜ್ಜನವರು ನೇತೃತ್ವ ವಹಿಸಿದ್ದರು.
ನಂತರ ಕಮಲಾಪುರ ದರ್ಗಾದ ಸಯ್ಯದ್ ಹುಸೇನ್ ಖಾದ್ರಿ ಸಮ್ಮುಖ ವಹಿಸಿದ್ದರು. ಪ್ರಕಾಶ ಅಂಗಡಿ ಹಾಗೂ ಅನೇಕ ಭಕ್ತರು ಪಾಲ್ಗೊಂಡಿದ್ದರು.
‘ಈಶ್ವರ ನಾಮವು ರಸನೆಗೆ ಬರಲು ಶಾಶ್ವತ ಸುಕೃತಂಗಳಿಗಿದು ಮಿಗಿಲು’ ಎಂಬ ವಿಷಯವನ್ನು ಡಾ. ಶಿವಕುಮಾರ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಪ್ರಸ್ತುತಗೊಳಿಸಲಾಯಿತು.
ಮಹಾಂತೇಶ ವಸ್ತ್ರದ, ಎಲ್.ಎಂ. ಗಡ್ಡಿ ಹಾಗೂ ವಿ.ಎಂ. ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.