chandiyaga ಜಗನ್ಮಾತೆ ಪ್ರೀತ್ಯರ್ಥವಾಗಿ ಚಂಡಿಯಾಗ

chandiyaga ಹುಬ್ಬಳ್ಳಿ ಸಮೀಪದ ತಡಸ ಕಮಲಾನಗರ ಶ್ರೀ ಕ್ಷೇತ್ರ ಪಂಚವಟಿಯಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ಏರ್ಪಡಿಸಿದ್ದ ಶ್ರೀ ಚಂಡೀಯಾಗದಲ್ಲಿ ಸ್ವಾಮಿ ತೇಜಸಾನಂದಜೀ ಮಹಾರಾಜ್​, ಸ್ವಾಮಿ ಬುದ್ಧಿಯೋಗಾನಂದಜೀ ಮಹಾರಾಜ್​, ಸ್ವಾಮಿ ಗಿರ್ವಾಣಾನಂದಜೀ ಮಹಾರಾಜ್​, ಇತರರು ಪಾಲ್ಗೊಂಡಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಲೋಕಕಲ್ಯಾಣಾರ್ಥ ಅಪಾರ ಭಕ್ತರಿಂದ ಸೇವೆ
  • ತಡಸ ಸಮೀಪದ ಕಮಲಾನಗರ ಪಂಚವಟಿಯಲ್ಲಿ ಆಯೋಜನೆ
ಹುಬ್ಬಳ್ಳಿ: chandiyaga ಸಮೀಪದ ತಡಸ ಕಮಲಾನಗರದ ಶ್ರೀಕ್ಷೇತ್ರ ಪಂಚವಟಿಯಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ಜಗನ್ಮಾತೆಯ ಪ್ರೀತ್ಯರ್ಥವಾಗಿ ಶ್ರೀಚಂಡೀಯಾಗವನ್ನು ಆಯೋಜಿಸಲಾಗಿತ್ತು.
ಆಶ್ರಮದ ಅಧ್ಯಕ್ಷ ಸ್ವಾಮಿ ತೇಜಸಾನಂದಜೀ ಮಹಾರಾಜ್​ ಹಾಗೂ ಸ್ವಾಮಿ ಬುದ್ಧಿಯೋಗಾನಂದಜೀ ಮಹಾರಾಜ್​, ಸ್ವಾಮಿ ಗಿರ್ವಾಣಾನಂದಜೀ ಮಹಾರಾಜ್​ ಅವರ ಸಾನ್ನಿಧ್ಯ ಮತ್ತು ಅಪಾರ ಭಕ್ತ ಸಮೂಹದ ಮಧ್ಯೆ ಶ್ರೀಚಂಡೀಯಾಗ ಭಕ್ತಿಭಾವದಿಂದ ನಡೆಯಿತು.
ಸ್ವಾಮಿ ತೇಜಸಾನಂದಜೀ ಮಹಾರಾಜ್​ ಅವರ ಭಗವನ್ನಾಮ ಸಂಕೀರ್ತನೆಗೆ ಡಾ. ನಾಗಲಿಂಗ ಮುರಗಿ ತಬಲಾ ಸಾಥ್​ ನೀಡಿದರು.
ಜಗನ್ಮಾತೆಯ ಪ್ರೀತ್ಯರ್ಥವಾಗಿ ಶ್ರೀಚಂಡೀಯಾಗವನ್ನು ಆಯೋಜಿಸಲಾಗಿದ್ದು, ತನ್ಮೂಲಕ ಲೋಕದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ. ಈ ಕ್ಷೇತ್ರದಲ್ಲಿ ಮೇಲಿಂದ ಮೇಲೆ ದೇವತಾ ಕಾರ್ಯಗಳನ್ನು, ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಮತ್ತು ಅವರ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವ ಕೌಶಲಗಳ ತರಬೇತಿ ನೀಡಲು ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ಎಲ್ಲರ ಸಹಾಯ ಸಹಕಾರ ಸದಾ ಇರಲಿ ಎಂದು ಶ್ರೀಗಳು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net