

ಪ್ರಮುಖ ಮುಖ್ಯಾಂಶಗಳು
ಹುಬ್ಬಳ್ಳಿ: chairperson ಕರ್ನಾಟಕದ ವಿಧಾನ ಪರಿಷತ್ಗೆ ಅದರದೇ ಆದ ಘನತೆ, ಗೌರವ ಇದೆ. ಅದು ಹಿರಿಯರ ಮನೆಯಾಗಿದೆ. ಚಿಂತಕರ ಚಾವಡಿ ಎಂದೇ ಕರೆಸಿಕೊಳ್ಳುವ ಇಲ್ಲಿ ಪಕ್ಷ ಭೇದ ಮರೆತು ಎಲ್ಲರೂ ನಾಡಿನ ಒಳಿತಿಗಾಗಿ ಚರ್ಚೆ ಮಾಡುತ್ತಾರೆ. ಅಂತಹ ಸಭೆಗೆ ಬಸವರಾಜ ಹೊರಟ್ಟಿ ಅವರು ಕಳಶಪ್ರಾಯರಾಗಿದ್ದು ಗಾಂಭಿರ್ಯದಿಂದ ಸಭೆ ನಡೆಸುತ್ತಿದ್ದರು. ಅವರ ಮೇಲೆ ಒತ್ತಡ ಹಾಕಿ ರಾಜೀನಾಮ ಪಡೆದಿರುವುದು ಸರಿಯಾದ ಕ್ರಮವಲ್ಲ ಎಂದು ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದರು.