ಫೀಲ್ಡ್​ ಟ್ರೇನರ್​ಗಳಿಗೆ ಜನಗಣತಿ ತರಬೇತಿ ಕಾರ್ಯಾಗಾರ

ಫೀಲ್ಡ್​ ಟೆನರ್​ಗಳಿಗೆ ಜನಗಣತಿ ತರಬೇತಿ ಕಾರ್ಯಾಗಾರ
ಫೀಲ್ಡ್​ ಟೆನರ್​ಗಳಿಗೆ ಜನಗಣತಿ ತರಬೇತಿ ಕಾರ್ಯಾಗಾರ
Published on
ಧಾರವಾಡ: ಜನಗಣತಿ ಕಾರ್ಯವು ಎರಡು ಹಂತಗಳಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಫೀಲ್ಡ್​ ಟ್ರೇನರ್​ಗಳಿಗೆ ಗಣತಿ ವಿಧಾನಗಳು, ಮಾಹಿತಿಯ ಸಂಗ್ರಹಣೆ ಹಾಗೂ ಕಾರ್ಯಪದ್ಧತಿಗಳ ಕುರಿತು ಡಿಜಿಟಲೀಕರಣಗೊಂಡ ಜನಗಣತಿ ಕಾರ್ಯದ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದು ಪಾಲಿಕೆಯ ಉಪ ಆಯುಕ್ತೆ ಅನುರಾಧಾ ವಸ್ತ್ರದ ಹೇಳಿದರು.
ಮಹಾನಗರ ಪಾಲಿಕೆಯ ಧಾರವಾಡ ಕಚೇರಿಯ ಸ್ವಾತಂತ್ರ್ಯದ ಅಮತ ಮಹೋತ್ಸವ ಸಭಾಭವನದಲ್ಲಿ ಭಾರತದ ಜನಗಣತಿ- 2027 ಕಾರ್ಯದ ಅಂಗವಾಗಿ ಫೀಲ್ಡ್​ ಟ್ರೇನರ್​ಗಳಿಗೆ ಆಯೋಜಿಸಿದ್ದ 3 ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮೊದಲ ಹಂತವಾಗಿ ಏ. 1ರಿಂದ 15ರವರೆಗೆ ಸ್ವಯಂ ಗಣತಿ ಕಾರ್ಯ ನಡೆಯಲಿದೆ. ಏ. 16ರಿಂದ ಮೇ 15ರವರೆಗೆ ಸಂಬಂಧಪಟ್ಟ ಗಣತಿದಾರರಿಂದ ಮನೆ ಪಟ್ಟಿ ಹಾಗೂ ಮನೆ ಗಣತಿ ಕಾರ್ಯ ನಡೆಯಲಿದೆ ಎಂದರು.
ಜಿಲ್ಲಾಡಳಿತದ ಪರ ಸಹಾಯಕ ನಿರ್ದೇಶಕ ಆರ್​.ಎಂ. ಕಂಟೆಪ್ಪಗೌಡರ ಹಾಗೂ ಮಹಾನಗರ ಪಾಲಿಕೆಯ ಪರ ಸಹಾಯಕ ನಿರ್ದೇಶಕಿ ರಶ್ಮಿ ಕೌಶಿಕ್​ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net