LAW ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಹಬ್ಬ ಆಚರಿಸಿ

ಹೋಳಿ ಹುಣ್ಣಿಮೆ ಹಾಗೂ ರಂಜಾನ್ ಪ್ರಯುಕ್ತ ಆಯೋಜಿಸಿದ್ದ ಪೂರ್ವಭಾವಿ ಶಾಂತಿ ಸಭೆಯಲ್ಲಿ ಪಿಎಸ್‌ಐ ಶರಣಬಸಪ್ಪ ಸಂಗಳದ ಮಾತನಾಡಿದರು.
ಹೋಳಿ ಹುಣ್ಣಿಮೆ ಹಾಗೂ ರಂಜಾನ್ ಪ್ರಯುಕ್ತ ಆಯೋಜಿಸಿದ್ದ ಪೂರ್ವಭಾವಿ ಶಾಂತಿ ಸಭೆಯಲ್ಲಿ ಪಿಎಸ್‌ಐ ಶರಣಬಸಪ್ಪ ಸಂಗಳದ ಮಾತನಾಡಿದರು.
Published on
ಕುಂದಗೋಳ: ಸಾರ್ವಜನಿಕರು ಕಾನೂನು (LAW) ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಸಹಕರಿಸಿದಾಗ ಮಾತ್ರ ಹಬ್ಬಗಳ ಸಂಭ್ರಮ ಸಾರ್ಥಕವಾಗುತ್ತದೆ ಎಂದು ಪಿಎಸ್‌ಐ ಶರಣಬಸಪ್ಪ ಸಂಗಳದ ಹೇಳಿದರು.
ಪಟ್ಟಣದ ಭೂತೇಶ್ವರ ದೇವಸ್ಥಾನದಲ್ಲಿ ಹೋಳಿ ಹುಣ್ಣಿಮೆ ಹಾಗೂ ರಂಜಾನ್ ಪ್ರಯುಕ್ತ ಇತ್ತೀಚೆಗೆ ಆಯೋಜಿಸಿದ್ದ ಪೂರ್ವಭಾವಿ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಕುಂದಗೋಳವು ಭಾವೈಕ್ಯದ ನೆಲೆವೀಡಾಗಿದ್ದು, ಮುಂಬರುವ ಹೋಳಿ ಹಾಗೂ ರಂಜಾನ್ ಹಬ್ಬಗಳನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು. ಹಬ್ಬದ ನೆಪದಲ್ಲಿ ಕಾನೂನು ಮೀರಿ ವರ್ತಿಸುವ ಅಥವಾ ಶಾಂತಿಗೆ ಭಂಗ ತರುವವರ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಪ್ರತಿಯೊಬ್ಬರೂ ಪರಸ್ಪರರ ಧರ್ಮ ಮತ್ತು ಸಂಪ್ರದಾಯಗಳನ್ನು ಗೌರವಿಸಿ, ಸೌಹಾರ್ದದಿಂದ ಹಬ್ಬ ಆಚರಿಸಬೇಕು ಎಂದರು. ಪಪಂ ಮಾಜಿ ಅಧ್ಯಕ್ಷ ಶಾಮಸುಂದರ ದೇಸಾಯಿ, ಮಂಜುನಾಥ ಹಿರೇಮಠ, ಗಣೇಶ ಕೋಕಾಟೆ, ಪ್ರವೀಣ ಬಡ್ನಿ, ಮಲೀಕ್ ಶಿರೂರ, ನಾಗರಾಜ ದೇಶಪಾಂಡೆ, ಶಂಕ್ರಪ್ಪ ಗೌರಿ, ಲಕ್ಷ್ಮಣ ಚುಳಕಿ, ಕಹಿಂ ನಾಲಬಂದ, ಜಾಫರಸಾಬ್ ಕ್ಯಾಲಕೊಂಡ, ವಿಠ್ಠಲ ಚವ್ಹಾಣ, ಮುತ್ತಣ್ಣ ಕೊಪ್ಪದ, ಪಾಂಡು ಕುಂಕೂರ, ಶರೀಫ ಜೋಗಮ್ಮನವರ, ಈರಣ್ಣ ನಾಗಣ್ಣವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net