6 ಡಿಜೆಗಳ ವಿರುದ್ಧ ಪ್ರಕರಣ ದಾಖಲು

ಡಿಜೆಗಳ ವಿರುದ್ಧ ಪ್ರಕರಣ ದಾಖಲು
ಡಿಜೆಗಳ ವಿರುದ್ಧ ಪ್ರಕರಣ ದಾಖಲು
Published on
ಧಾರವಾಡ: ಡಿಜೆ ಬಳಕೆಗೆ ಕಠಿಣ ನಿಯಮ ವಿಧಿಸಿ ಪೊಲೀಸ್​ ಇಲಾಖೆ ಅನುಮತಿ ನೀಡಿತ್ತು. ಆದಾಗ್ಯೂ ಸೆ. 14ರಂದು ಗಣೇಶ ಮೂತಿರ್ಗಳ ಪ್ರತಿಷ್ಠಾಪನೆ ವೇಳೆ ನಿಯಮಾವಳಿ ಮೀರಿದ ಡಿಜೆ ಸಿಸ್ಟಮ್​ ಆಪರೇಟರ್​ಗಳು ಮತ್ತು ಸೌಂಡ್​ ಸಿಸ್ಟಮ್​ಗಳ ವಿರುದ್ಧ ಅವಳಿನಗರದ 4 ಠಾಣೆಗಳಲ್ಲಿ 6 ಪ್ರಕರಣಗಳು ದಾಖಲಾಗಿವೆ. ಡಿಜೆ ಕರ್ಕಶ ಸದ್ದು ಮಹಿಳೆಯರು, ಹಿರಿಯ ನಾಗರಿಕರು ಮತ್ತು ಸಾರ್ವಜನಿಕರಿಗೆ ಅನಾನುಕೂಲತೆ ಉಂಟು ಮಾಡಿದೆ. ಅಲ್ಲದೆ, ರೋಗಿಗಳು ಮತ್ತು ಗಭಿರ್ಣಿಯರಿಗೆ ಆದ ತೊಂದರೆಗಳ ಬಗ್ಗೆ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯಿಂದ ದೂರುಗಳು ಬಂದಿದ್ದವು. ಮಿತಿಮೀರಿದ ಧ್ವನಿ ಹೊರಡಿಸಿದ್ದಲ್ಲದೆ, ಸಾರ್ವಜನಿಕರ ಕಣ್ಣುಗಳ ಮೇಲೆ ಪರಿಣಾಮ ಬೀರುವ ಫೋಕಸ್ ಲೈಟ್​ ಬಳಸಿ ತೊಂದರೆ ಉಂಟು ಮಾಡಿದ ಹಿನ್ನೆಲೆಯಲ್ಲಿ ಧಾರವಾಡ ಶಹರ ಠಾಣೆಯಲ್ಲಿ 2, ವಿದ್ಯಾಗಿರಿ ಠಾಣೆಯಲ್ಲಿ 2, ಉಪನಗರ ಹಾಗೂ ಹುಬ್ಬಳ್ಳಿ ಎಪಿಎಂಸಿ ಪೊಲೀಸ್​ ಠಾಣೆಯಲ್ಲಿ ತಲಾ 1 ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net