

ಪ್ರಮುಖ ಮುಖ್ಯಾಂಶಗಳು
ಈಗ ದೇವಸ್ಥಾನದ ಪುಷ್ಕರಣಿ ಅತಿಕ್ರಮಣ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.
ಧಾರವಾಡ ಜಿಲ್ಲೆಯ ಇತಿಹಾಸದ ಬಗ್ಗೆ ಪ್ರಾಚ್ಯವಸ್ತು ಇಲಾಖೆಯ ಗ್ರಂಥದಲ್ಲಿ ಭವಾನಿಶಂಕರ ದೇವಸ್ಥಾನದ ಆವರಣದಲ್ಲಿ ಪುಷ್ಕರಣೆ ಇರುವ ಬಗ್ಗೆ ದಾಖಲೆ ಇದೆ.
2017ರಲ್ಲಿ ಹಿಂದೂ ಸಂಘಟನೆ ಮಾಹಿತಿ ಹಕ್ಕು ಆಧಾರದಡಿ ಕೇಳಿದ್ದ ಅರ್ಜಿಯಲ್ಲಿಯೂ ಪುಷ್ಕರಣಿ ಇರುವ ದಾಖಲೆಯನ್ನು ಸ್ವತಃ ಪ್ರಾಚ್ಯವಸ್ತು ಇಲಾಖೆ ನೀಡಿದೆ ಎಂದು ತಿಳಿಸಿದರು.
ಆದರೆ, ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರದ ಒತ್ತಡಕ್ಕೆ ಮಣಿದಿರುವ ಪ್ರಾಚ್ಯವಸ್ತು ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಯುಕ್ತರು, ಪುಷ್ಕರಣಿ ಇರುವ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ ಎಂದರು.
ಆ ಜಾಗದಲ್ಲಿ ಪುಷ್ಕರಣಿ ಇರುವ ಬಗ್ಗೆ ಸರ್ಕಾರ ಸರ್ವೆ ನಡೆಸಲಿ. ಭೂಮಿಯನ್ನು ಅಗೆಯದೇ ತಂತ್ರಜ್ಞಾನದ ಮೂಲಕ ಸರ್ವೆ ಕಾರ್ಯ ನಡೆಸಬಹುದಾಗಿದೆ ಎಂದು ಹೇಳಿದರು.
ಪ್ರಾಚ್ಯವಸ್ತು ಇಲಾಖೆ ನಿಯಮಗಳ ಪ್ರಕಾರ ದೇವಸ್ಥಾನದ ಸುತ್ತಲಿನ 100 ಮೀಟರ್ವರೆಗೆ ಯಾವುದೇ ಮನೆ ಅಥವಾ ಇನ್ನಿತರ ಕಟ್ಟಡಗಳು ಇರಬಾರದು.
100 ಮೀಟರ್ವೊಳಗಿನ ಕಟ್ಟಡಗಳನ್ನು ತಕ್ಷಣ ನೆಲಸಮಗೊಳಿಸಿ, ದೇವಸ್ಥಾನದ ಸುತ್ತಲೂ ತಂತಿಬೇಲಿ ಹಾಕಬೇಕು ಎಂದು ಒತ್ತಾಯಿಸಿದರು.
ದೇವಸ್ಥಾನದ ಗರ್ಭಗುಡಿ ಎದುರು ಮಾಂಸದ ಅಂಗಡಿ ಇದೆ. ದೇವಸ್ಥಾನದ 20 ಮೀಟರ್ವೊಳಗೆ ಮುಸ್ಲಿಂ ವ್ಯಕ್ತಿಯ ಲೇತ್ ಮಷಿನ್ ಇದೆ. ಹಿಂದೂಗಳ ದೇವಸ್ಥಾನಗಳಿಗೆ ತನ್ನದೇ ಆದ ಪಾವಿತ್ರ್ಯತೆ ಇದೆ.
ಪ್ರಾಚ್ಯವಸ್ತು ಇಲಾಖೆಗೆ ತನ್ನ ವ್ಯಾಪ್ತಿಗೆ ಸೇರಿರುವ ದೇವಸ್ಥಾನಗಳ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕೆಂಬ ಅರಿವು ಇಲ್ಲವೇ ? ಎಂದು ಪ್ರಶ್ನಿಸಿದರು.
ಮಾಂಸದ ಅಂಗಡಿ ಹಾಗೂ ಲೇಥ್ ಮಷಿನ್ ಅನ್ನು ತಕ್ಷಣ ತೆರವುಗೊಳಿಸಬೇಕು. ದೇವಸ್ಥಾನದ ಪುಷ್ಕರಣಿ ಅತಿಕ್ರಮಗೊಳ್ಳಲು ಬಿಡುವುದಿಲ್ಲ ಎಂದು ಹೇಳಿದರು.