ಪ್ಲಾಸ್ಟಿಕ್ ಮುಕ್ತ ವಾತಾವರಣಕ್ಕಾಗಿ ಕ್ಯಾರ್ ರ‍್ಯಾಲಿ Car rally

Car rally  ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಹುಬ್ಬಳ್ಳಿ ವಿದ್ಯಾನಗರ ರೋಟರಿ ಕ್ಲಬ್ ಅಧ್ಯಕ್ಷ ಪ್ರವೀಣ ಜೈನ್,.
Car rally ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಹುಬ್ಬಳ್ಳಿ ವಿದ್ಯಾನಗರ ರೋಟರಿ ಕ್ಲಬ್ ಅಧ್ಯಕ್ಷ ಪ್ರವೀಣ ಜೈನ್,.
Published on

ಪ್ರಮುಖ ಮುಖ್ಯಾಂಶಗಳು

  • 70 ಕಾರುಗಳು ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿವೆ.
  • ಪ್ಲಾಸ್ಟಿಕ್ ಬಳಕೆ ಕುರಿತು ಜಾಗೃತಿ ಮೂಡಿಸಲಾಗುವುದು
  • ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾದ ವಿವಿಧೆಡೆಯಿಂದ ಕಾರ್ ರ‍್ಯಾಲಿ ನಡೆಯಲಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಹುಬ್ಬಳ್ಳಿ ವಿದ್ಯಾನಗರ ರೋಟರಿ ಕ್ಲಬ್ ಅಧ್ಯಕ್ಷ ಪ್ರವೀಣ ಜೈನ್, ಅಂದು ಬೆಳಗ್ಗೆ 7.30ಕ್ಕೆ ಗೋಕುಲ ರಸ್ತೆಯ ಇನೋರ್ಬಿಟ್ ಮಾಲ್ ಎದುರು ಶಾಸಕ ಮಹೇಶ ಟೆಂಗಿನಕಾಯಿ ಕಾರ್ ರ್ಯಾಲಿಗೆ ಚಾಲನೆ ನೀಡುವರು ಎಂದರು.
70 ಕಾರುಗಳು ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿವೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾದ ವಿವಿಧೆಡೆಯಿಂದ ಕಾರ್ ರ‍್ಯಾಲಿ ನಡೆಯಲಿದೆ.
ಅದೇ ದಿನ ಸಂಜೆ 6.30ಕ್ಕೆ ಗೋವಾದ ಮಿರಾಮಾರ್​ನ ಕ್ಲಬ್ ಡಿ ಗ್ಯಾಸ್ಪರ್ ಡಯಾಸ್​ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ರ‍್ಯಾಲಿಯಲ್ಲಿ ನಿರ್ದಿಷ್ಟ ಸಮಯ ಮತ್ತು ಸರಾಸರಿ ವೇಗ ಕಾಪಾಡಿಕೊಳ್ಳುವ ಶಿಸ್ತುಬದ್ಧ ಚಾಲನಾ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಪ್ರಶಸ್ತಿ ನೀಡಲಾಗುವುದು ಎಂದರು.
ಕಲಘಟಗಿ, ಬೀಡಿ, ಕಿತ್ತೂರ ಮಾರ್ಗವಾಗಿ ರ‍್ಯಾಲಿ ನಡೆಯಲಿದೆ. ಮಾರ್ಗ ಮಧ್ಯದ ಹಳ್ಳಿ, ಪಟ್ಟಣಗಳಲ್ಲಿ ಪ್ಲಾಸ್ಟಿಕ್ ಬಳಕೆ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ವಿಕ್ರಮ ಜೈನ್, ವೀನಲ್ ಶಾ, ಸಂಜಯ ಶೆಟ್ಟಿ, ಮೇಘನಾ ಲೊಡಾಯಾ ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net