ಹುಬ್ಬಳ್ಳಿ: ಸ್ವಚ್ಛ ಭಾರತ ಅಭಿಯಾನ Campaign ನಿಮಿತ್ತ ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ. 67ರ ಚಿಂದಿ ಓಣಿ, ಪ್ರಥಮ ಶೆಟ್ಟಿ ಓಣಿ ಹಾಗೂ ಅರಳಿಕಟ್ಟಿ ಓಣಿ ಪ್ರದೇಶಗಳಲ್ಲಿ ಭಾನುವಾರ ಸ್ವಚ್ಛ ಸಂಡೆ ಅಭಿಯಾನ ನಡೆಸಿ 20ನೇ ವಾರಕ್ಕೆ ಪದಾರ್ಪಣೆ ಮಾಡಲಾಯಿತು.
ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಅವರ ನೇತೃತ್ವದಲ್ಲಿ ಪೌರ ಕಾರ್ಮಿಕರು, ಒಣಗಿದ ಮರದ ಕೊಂಬೆ, ಎಲೆಗಳು ಮತ್ತು ರಸ್ತೆಯಲ್ಲಿದ್ದ ಕಸವನ್ನು ವಿಲೇವಾರಿಗೊಳಿಸಿದರು. ಸೊಳ್ಳೆಗಳ ಉಪಟಳ ತಡೆಯಲು ಫಾಗಿಂಗ್ ಮಾಡಿಸಲಾಯಿತು.
ಪಾಲಿಕೆಯ ಆರೋಗ್ಯಾಧಿಕಾರಿ ನೂರಂದಪ್ಪ ಭಜಂತ್ರಿ, ಪೌರ ಕಾರ್ಮಿಕರು ಹಾಗೂ ಸ್ಥಳೀಯರು ಇದ್ದರು.