CA Felicitation ಹುಬ್ಬಳ್ಳಿಯ ಜೈಂಟ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ನಲ್ಲಿ ವೈದ್ಯರು ಹಾಗೂ ಲೆಕ್ಕಪರಿಶೋಧಕರ ದಿನಾಚರಣೆ ಅಂಗವಾಗಿ ಸಿಎ ಎಂ.ಕೆ. ಬಾಬಜಿ, ಡಾ. ಎಸ್.ಆರ್. ಹನುಮರಡ್ಡಿ, ಸಿಎ ಅಮಿತ ಬಾಬಜಿ, ಡಾ. ಮಿಲಿಂದ ಗಲಗಲಿ ಅವರನ್ನು ಸನ್ಮಾನಿಸಲಾಯಿತು.
ಹುಬ್ಬಳ್ಳಿ: CA Felicitation ಇಲ್ಲಿಯ ಗೋಕುಲ ರಸ್ತೆ ಜೈಂಟ್ಸ್ ಎಜುಕೇಶನ್ ಸೊಸೈಟಿಯ ಜೈಂಟ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ನಲ್ಲಿ ವೈದ್ಯರು ಹಾಗೂ ಲೆಕ್ಕಪರಿಶೋಧಕರ ದಿನ ಆಚರಿಸಲಾಯಿತು.
ಅತಿಥಿಗಳಾಗಿದ್ದ ಡಾ. ಮುರಳೀಧರ ರಾವ್ ಮಾತನಾಡಿ, ಮಕ್ಕಳು ಆರೋಗ್ಯಕರ ಆಹಾರ ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ದೈಹಿಕವಷ್ಟೇ ಅಲ್ಲದೇ ಮಾನಸಿಕ ಆರೋಗ್ಯವೂ ಮಹತ್ವದ್ದು. ವೈದ್ಯರು ಆರೋಗ್ಯದ ಕಾಳಜಿ ಮಾಡಿದರೆ, ಲೆಕ್ಕಪರಿಶೋಧಕರು ಸಂಪತ್ತಿನ ಕಾಳಜಿ ಮಾಡುತ್ತಾರೆ ಎಂದರು.
ಸಿಎ ವಿನಯ ಕುಲಕರ್ಣಿ ಮಾತನಾಡಿ, ಲೆಕ್ಕಪರಿಶೋಧಕರಾಗಬೇಕಾದರೆ ಕಠಿಣ ಪರಿಶ್ರಮ ಬೇಕಾಗುತ್ತದೆ. ಬರಿ ಅಂಕ ಮತ್ತು ಪ್ರಮಾಣ ಪತ್ರಗಳಲ್ಲಿ ಸಾಧನೆ ಮಾಡಿದರೆ ಸಾಲದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಕೌಶಲ ಬೆಳೆಸಿಕೊಳ್ಳಬೇಕು. ಶಿಕ್ಷಕರಿಗೆ, ಹಿರಿಯರಿಗೆ ಗೌರವ ನೀಡಬೇಕು. ಕಷ್ಟ ಪಟ್ಟು ಕೆಲಸ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಎನ್.ಆರ್. ರವಿ ಅವರು, ಮಕ್ಕಳು ಯಾವುದೇ ವೃತ್ತಿ ಆಯ್ದುಕೊಂಡರೂ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ತಂದೆ, ತಾಯಿ, ಗುರು, ಹಿರಿಯರನ್ನು ಗೌರವಿಸಿ ಎಂದು ಹೇಳಿದರು.
ಸೊಸೈಟಿ ಮಾಜಿ ಅಧ್ಯಕ್ಷ ಸಿಎ ಎಂ.ಕೆ. ಬಾಬಜಿ, ಡಾ. ಎಸ್.ಆರ್. ಹನುಮರಡ್ಡಿ, ಖಜಾಂಚಿ ಸಿಎ ಅಮಿತ ಬಾಬಜಿ, ಡಾ. ಮಿಲಿಂದ ಗಲಗಲಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯದರ್ಶಿ ಅಶೋಕ ವಕ್ಕುಂದ, ಮಾಜಿ ಅಧ್ಯಕ್ಷ ಪರಶುರಾಮ ಊಟವಾಲೆ, ಜಿ.ಎಸ್. ನಾಯಕ, ಅಂಬೇಶ ಊಟವಾಲೆ, ವ್ಯವಸ್ಥಾಪಕಿ ಪಲ್ಲವಿ ಪಾಸ್ತೆ, ಪ್ರಾಚಾರ್ಯ ಬಸವರಾಜ ಚಟ್ನಿ, ರೇಣುಕಾ ಕತಕಲಿ, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.