ಬಿವಿಜಿ ವೆಲ್​ನೆಸ್ ಸೆಂಟರ್ ಪ್ರಾರಂಭೋತ್ಸವ BVG

BVG  ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ಬಿವಿಜಿ ವೆಲ್​ನೆಸ್ ಸೆಂಟರ್ ಕುರಿತ ಸುದ್ದಿಗೋಷ್ಠಿಯಲ್ಲಿ ಸಂಜಯ ಡೋಂಗರೆ, ಡಾ. ಜಯಶ್ರೀ ದ್ರಾವಿಡ್, ಹನುಮಂತ ಮಳಲಿ, ಇತರರಿದ್ದರು.
BVG ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ಬಿವಿಜಿ ವೆಲ್​ನೆಸ್ ಸೆಂಟರ್ ಕುರಿತ ಸುದ್ದಿಗೋಷ್ಠಿಯಲ್ಲಿ ಸಂಜಯ ಡೋಂಗರೆ, ಡಾ. ಜಯಶ್ರೀ ದ್ರಾವಿಡ್, ಹನುಮಂತ ಮಳಲಿ, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನರಗುಂದ ತಾಲೂಕಿನ ವಾಸನ ಗ್ರಾಮದಲ್ಲಿ ಆರಂಭ
  • ಆಯುರ್ವೆದ ಔಷಧಗಳಿಂದ ಲಕ್ಷಾಂತರ ಜನರಿಗೆ ಉಪಯೋಗವಾಗಿದೆ.
  • ಕ್ಯಾನ್ಸರ್ ಔಷಧ ಪೂರೈಕೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಹುಬ್ಬಳ್ಳಿ :
ಕೊಪ್ಪಳ ಸಂಸ್ಥಾನ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹಾಗೂ ಕೇರಳ ಮಹಾಪೀಠಂನ ಶ್ರೀ ಸಹಸ್ರಾರ ಯೋಗೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಚಿವರಾದ ಎಚ್.ಕೆ. ಪಾಟೀಲ, ದಿನೇಶ ಗುಂಡೂರಾವ, ಹೈಕೋರ್ಟ್ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ, ಶಾಸಕ ಸಿ.ಸಿ. ಪಾಟೀಲ, ಮಾಜಿ ಶಾಸಕ ಬಿ.ಆರ್. ಯಾವಗಲ್, ನಿವೃತ್ತ ಡಿಜಿಪಿ ಶಂಕರ ಬಿದರಿ, ಬಿವಿಜಿ ಇಂಡಿಯಾ ಲಿ. ಸಿಇಒ ಮತ್ತು ಎಂಡಿ ಹನುಮಂತರಾವ್ ಗಾಯಕವಾಡ, ಪಾರಂಪರಿಕ ವೈದ್ಯ ಹನುಮಂತ ಮಳಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಹನುಮಂತ ಮಳಲಿ ಅವರೊಂದಿಗೆ ಕ್ಯಾನ್ಸರ್ ಔಷಧ ಪೂರೈಕೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಬಿವಿಜಿ ((ಭಾರತ ವಿಕಾಸ್ ಗ್ರುಪ್) ತನ್ನ ಪ್ರಥಮ ಚಿಕಿತ್ಸಾ ಕೇಂದ್ರವನ್ನು ವಾಸನ ಗ್ರಾಮದ ಸ್ವಯಂ ಸಂಜೀವಿನಿ ಆಶ್ರಮದಲ್ಲಿ ಆರಂಭಿಸುತ್ತಿದೆ ಎಂದರು.
ಕ್ಯಾನ್ಸರ್, ಲೀವರ್, ಹೃದ್ರೋಗ, ಚರ್ಮರೋಗ, ಸೊರಿಯಾಸಿಸ್, ರ್ಪಾನ್​ಸನ್ ಸೇರಿ 200ಕ್ಕೂ ಹೆಚ್ಚು ಔಷಧ ಉತ್ಪಾದಿಸಿ, ಮಾರುಕಟ್ಟೆಗೆ ಬಿಡಲಾಗಿದೆ. ಬಿವಿಜಿಯ ಈ ಆಯುರ್ವೆದ ಔಷಧಗಳಿಂದ ಲಕ್ಷಾಂತರ ಜನರಿಗೆ ಉಪಯೋಗವಾಗಿದೆ. ವಾಸನ ಗ್ರಾಮದಲ್ಲಿ ಅತ್ಯುತ್ತಮ ಪ್ರಯೋಗಾಲಯ, ಯೋಗ ವಿಭಾಗ, ರೋಗಿಗಳ ತಪಾಸಣೆ ವಿಭಾಗಗಳು ಹಾಗೂ ಇನ್ನಿತರ ಸೌಲಭ್ಯಗಳಿವೆ ಎಂದರು.
ಬಿವಿಜಿಯ ವಿಮಾನ ನಿಲ್ದಾಣಗಳ ನಿರ್ವಹಣೆ, ಹೌಸ್ಕೀಪಿಂಗ್, ಕೃಷಿ, ತೋಟಗಾರಿಕೆ ಇನ್ನಿತರ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. 2024-25ನೇ ಹಣಕಾಸು ವರ್ಷದಲ್ಲಿ 15,532 ಕೋಟಿ ರೂ. ಆದಾಯ ಗಳಿಸಿದೆ ಎಂದರು.
ಬಿವಿಜಿ ಲೈಫ್ ಸೈನ್ಸಸ್ ನಿರ್ದೇಶಕಿ ಡಾ. ಜಯಶ್ರೀ ದ್ರಾವಿಡ್, ಹನುಮಂತ ಮಳಲಿ, ಡಾ. ಅರುಣಕುಮಾರ, ಡಾ. ಸುಶೀಲಾ, ಡಾ. ವಿದ್ಯಾ, ಡಾ. ರವಿ ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net