ಜೋಲಿ ಹೋದೀತು ಜೋಕೆ! bus problem

ಅಣ್ಣಿಗೇರಿಯಿಂದ ಗದಗಕ್ಕೆ ತೆರಳುವ ಬಸ್‌ಗೆ ಮುಗಿಬಿದ್ದಿರುವ ವಿದ್ಯಾರ್ಥಿಗಳು.
ಅಣ್ಣಿಗೇರಿಯಿಂದ ಗದಗಕ್ಕೆ ತೆರಳುವ ಬಸ್‌ಗೆ ಮುಗಿಬಿದ್ದಿರುವ ವಿದ್ಯಾರ್ಥಿಗಳು.
Published on

ಹೇಮಂತ ಕುರಹಟ್ಟಿ ಅಣ್ಣಿಗೇರಿ

ತಾಲೂಕಿನಲ್ಲಿ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೆ ಇರುವ ಕಾರಣ ವಿದ್ಯಾರ್ಥಿಗಳು ಬಸ್ ಮೆಟ್ಟಿಲು ಮೇಲೆ ಜೀವ ಕೈಯಲ್ಲಿ ಹಿಡಿದು ಜೋತು ಬಿದ್ದು ಹೋಗುವುದು ಸರ್ವೇ ಸಾಮಾನ್ಯವಾಗಿದೆ.

ಅದರಲ್ಲೂ ಅಣ್ಣಿಗೇರಿ ಮಾರ್ಗವಾಗಿ ಗದಗ-ಹುಬ್ಬಳ್ಳಿ ಕಡೆ ಹೋಗುವ ಸಾರಿಗೆ ಬಸ್‌ಗಳು ಫುಲ್ ರಶ್ ಆಗಿ ಸಂಚರಿಸುತ್ತಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಬೆಳಗ್ಗೆ ಬಸ್‌ಗಳ ಸಂಚಾರ ಕಡಿಮೆ ಇರುವ ಕಾರಣಕ್ಕೆ ವಿದ್ಯಾರ್ಥಿಗಳು ಬಸ್‌ಗಳು ರಶ್ ಆಗುವ ಕಾರಣಕ್ಕೆ ತುದಿಗಾಲಲ್ಲಿ ನಿಂತು ಹೋಗುವುದು ಅನಿವಾರ್ಯವಾಗಿದೆ. ಇದನ್ನು ನೋಡಿದರೆ ಮೈಜುಮ್ಮ ಅನಿಸುತ್ತದೆ. ಅಪಾಯಕಾರಿಯಾಗಿ ಬಸ್‌ಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ ಗದಗ ಕಡೆಗೆ ಬಸ್ ಓಡಿಸಬೇಕು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ಕೆಗೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ.

ಕೆಲವೊಮ್ಮೆ ಬಸ್‌ಗಳು ಸರಿಯಾದ ಸಮಯಕ್ಕೆ ಬಂದರೆ,ಇನ್ನೂ ಕೆಲವು ಸಂದರ್ಭದಲ್ಲಿ ಸಮಯ ತಪ್ಪಿ ಬರುವುದರಿಂದ ಶಾಲೆ-ಕಾಲೇಜಿಗೆ ತಡವಾಗಿ ತಲುಪಬೇಕಾಗುತ್ತದೆ. ಈ ಭಾಗದಲ್ಲಿ ಅತಿ ಕಡಿಮೆ ಬಸ್ ಸಂಚಾರ ಇರುವುದರಿಂದ ಲಭ್ಯವಿರುವ ಬಸ್‌ನಲ್ಲಿಯೇ ಹೋಗಬೇಕಾಗಿದೆ. ಪ್ರತಿ ದಿನ ಬಸ್‌ನಲ್ಲಿ ರಶ್ ಇರುವುದರಿಂದ ಕಾಲಿಡಲು ಜಾಗ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಬಾಗಿಲಲ್ಲಿ ಜೋತು ಬಿದ್ದು ಶಾಲೆ, ಕಾಲೇಜಿಗೆ ಹೋಗಿ ಬರಬೇಕಿದೆ.
ಅಪಾಯಕಾರಿಯಾಗಿ ಖಾಸಗಿ ಬಸ್ ವಾಹನಗಳಲ್ಲಿ ಪ್ರಯಾಣ ಮಾಡುವುದು ಭವಿಷ್ಯದ ದೃಷ್ಟಿಯಿಂದ ಉತ್ತಮವಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಹೆಚ್ಚು ಬಸ್‌ಗಳನ್ನು ಗದಗ ರಸ್ತೆಯಲ್ಲಿ ಓಡಿಸಬೇಕು ಎಂದು ವಿದ್ಯಾರ್ಥಿಗಳು, ಪ್ರಯಾಣಿಕರು ಒತ್ತಾಯಿಸಿದ್ದಾರೆ.
"

ಬಸ್ ಸಮಸ್ಯೆ ಕೂಡಲೇ ಪರಿಶೀಲಿಸುತ್ತೇನೆ. ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗ ಎಅನುಕೂಲವಾಗುವಂತೆ ಇನ್ನೆರಡು ಬಸ್‌ಗಳ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತೇನೆ.

— ಪ್ರಸಾದ ತಳವಾರ ನವಲಗುಂದ ಡೀಪೂ ಮ್ಯಾನೇಜರ್

"

ನವಲಗುಂದದಿಂದ ಗದಗ ಕಡೆಗೆ ಬಸ್‌ಗಳು ಸಂಚಾರ ಕಡಿಮೆ ಇದೆ. ಹಲವು ಬಾರಿ ಇಲ್ಲಿನ ಕಂಟ್ರೋಲರ್ ಅವರಿಗೆ ತಿಳಿಸಿದ್ದೇವೆ ಮತ್ತು ಮನವಿ ಕೂಡ ಮಾಡಿಕೊಂಡಿದ್ದೇವೆ. ಆದರೂ ಸಮಸ್ಯೆ ಪರಿಹಾರವಾಗಿಲ್ಲ. ಇದು ನಮ್ಮ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ.

— ದಾವಲ್‌ಸಾಬ್ ಸುಂಕದ ವಿದ್ಯಾರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net