bunt sanman ಎಲ್ಲರೊಂದಿಗೂ ಆತ್ಮೀಯತೆಯಿಂದ ಬೆರೆಯುವ ಸ್ವಭಾವ

bunt sanman ಹುಬ್ಬಳ್ಳಿಯ ನವೀನ ಹೋಟೆಲ್​ನಲ್ಲಿ ಭಾನುವಾರ ಏರ್ಪಡಿಸಿದ್ದ ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಸುವರ್ಣ ಮಹೋತ್ಸವ ಸಮಾರೋಪದಲ್ಲಿ ಡಾ. ಎಂ. ಮೋಹನ ಆಳ್ವಾ, ಡಾ. ಕೆ. ಪ್ರಕಾಶ ಶೆಟ್ಟಿ, ಯು. ಸೀತಾರಾಮ ಶೆಟ್ಟಿ ಅವರಿಗೆ ಡಾ. ಆರ್​.ಎನ್​. ಶೆಟ್ಟಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಜಯಾನಂದ ಶೆಟ್ಟಿ, ಭಾರತಿ ಶೆಟ್ಟಿ, ಸುರೇಶ ಶೆಟ್ಟಿ, ಇತರರು ಇದ್ದರು.
bunt sanman ಹುಬ್ಬಳ್ಳಿಯ ನವೀನ ಹೋಟೆಲ್​ನಲ್ಲಿ ಭಾನುವಾರ ಏರ್ಪಡಿಸಿದ್ದ ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಸುವರ್ಣ ಮಹೋತ್ಸವ ಸಮಾರೋಪದಲ್ಲಿ ಡಾ. ಎಂ. ಮೋಹನ ಆಳ್ವಾ, ಡಾ. ಕೆ. ಪ್ರಕಾಶ ಶೆಟ್ಟಿ, ಯು. ಸೀತಾರಾಮ ಶೆಟ್ಟಿ ಅವರಿಗೆ ಡಾ. ಆರ್​.ಎನ್​. ಶೆಟ್ಟಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಜಯಾನಂದ ಶೆಟ್ಟಿ, ಭಾರತಿ ಶೆಟ್ಟಿ, ಸುರೇಶ ಶೆಟ್ಟಿ, ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಭಾಪತಿ ಬಸವರಾಜ ಹೊರಟ್ಟಿ ಅಭಿಮತ
  • ಬಂಟರ ಸಂಘದ ಸುವರ್ಣ ಮಹೋತ್ಸವ ಸಮಾರೋಪ
ಹುಬ್ಬಳ್ಳಿ: bunt sanman ಬಂಟ ಸಮಾಜದವರು ಎಲ್ಲರೊಂದಿಗೂ ಆತ್ಮೀಯತೆಯಿಂದ ಬೆರೆಯುವ ಸ್ವಭಾವದವರು. ಯಾರೊಂದಿಗೂ ಜಗಳ ಕಾಯುವವರಲ್ಲ, ದುಡಿದು ತಿನ್ನುವ ಮೂಲಕ ಇತರರಿಗೆ ಮಾದರಿಯಾದವರು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಇಲ್ಲಿಯ ನವೀನ ಹೋಟೆಲ್​ನಲ್ಲಿ ಭಾನುವಾರ ಏರ್ಪಡಿಸಿದ್ದ ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಸುವರ್ಣ ಮಹೋತ್ಸವ ಸಮಾರೋಪದಲ್ಲಿ ಅವರು ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಹುಬ್ಬಳ್ಳಿ ಧಾರವಾಡದಲ್ಲಿ ಆರ್​.ಎನ್​. ಶೆಟ್ಟಿ ಅವರು ಸಂಘ ಕಟ್ಟಿ ಈಗ 50 ವರ್ಷ ಆಗಿದೆ. ನಂತರದಲ್ಲಿಯೂ ಅದು ಉತ್ತಮವಾಗಿ ಬೆಳೆದು ಬಂದಿದೆ. ಅವಳಿನಗರದಲ್ಲಿ ಲಕ್ಷಕ್ಕೂ ಹೆಚ್ಚು ಜನ ಬಂಟ ಸಮಾಜದವರು ಇದ್ದು, ಬಹಳಷ್ಟು ಪರಿಶ್ರಮ ಪಟ್ಟು ಈ ಭಾಗದ ಶ್ರೇಯೋಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಡಾ. ಆರ್​.ಎನ್​. ಶೆಟ್ಟಿ ಸ್ಮಾರಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೂಡುಬಿದ್ರೆ ಆಳ್ವಾಸ್​ ಫೌಂಡೇಷನ್​ ಅಧ್ಯಕ್ಷ ಡಾ. ಎಂ. ಮೋಹನ ಆಳ್ವಾ, ಕಾಲ ಬದಲಾದಂತೆ ಕುಟುಂಬ ವ್ಯವಸ್ಥೆ ವಿಘಟನೆಯತ್ತ ಸಾಗಿದ್ದು, ಈ ದಿಸೆಯಲ್ಲಿ ಸಮಾಜದ ಜನರು ಮಕ್ಕಳನ್ನು ಒಟ್ಟಿಗೆ ಸೇರಿಸಿ ಸಮಾಜ ಸಂಘಟನೆಯೊಂದಿಗೆ ನಮ್ಮ ಭಾಷೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಮಾಡಬೇಕು ಎಂದು ಹೇಳಿದರು.
ಮಕ್ಕಳಿಗಾಗಿ ಆಸ್ತಿ ಮಾಡದೇ ಉತ್ತಮ ವಿದ್ಯಾಭ್ಯಾಸ ನೀಡಿ ಮಕ್ಕಳನ್ನೇ ಆಸ್ತಿಯಾಗಿ ಮಾಡಬೇಕು. ಬಂಟ ಸಮಾಜ ಯಾವತ್ತೂ ಸೋಲನ್ನು ಒಪ್ಪಿಕೊಂಡಿಲ್ಲ. ಸವಕಲು ನಾಣ್ಯ ಆಗದೇ ಚಲಾವಣೆಯಲ್ಲಿರುವ ನಾಣ್ಯ ಆಗಬೇಕು. ಹಾಗಾಗಿ ಎಲ್ಲ ಸವಾಲನ್ನು ಎದುರಿಸಿ ಸಾಧನೆಗೆ ಮುಂದಾಗಬೇಕು ಎಂದರು.
ಬಡವ ಹಾಗೂ ಶ್ರೀಮಂತರ ಮಧ್ಯೆ ದೊಡ್ಡ ಕಂದಕ ಇದೆ. ಈ ಕಂದಕ ಕಡಿಮೆ ಮಾಡಬೇಕಾದರೆ ಅಗತ್ಯ ಇರುವವರಿಗೆ ಸಹಾಯ ಮಾಡಬೇಕು. ಆ ಮೂಲಕ ಸಮಾನತೆ ಕಾಯ್ದುಕೊಳ್ಳಬೇಕು. ನಮ್ಮ ಫೌಂಡೇಷನ್ ಕೂಡ ಸಮಾಜದ ಬಡ ಮಕ್ಕಳಿಗೆ ನೆರವಾಗಲು ಸಿದ್ಧ ಇದೆ. ದತ್ತು ಸ್ವೀಕರಿಸಿ ಶಿಕ್ಷಣ ನೀಡಲಾಗುವುದು ಎಂದರು.
ಡಾ. ಕೆ. ಪ್ರಕಾಶ ಶೆಟ್ಟಿ, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಮಾತನಾಡಿದರು.
ಎಂಎಲ್​ಸಿ ಭಾರತಿ ಶೆಟ್ಟಿ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಸಂಘದ ಮಾಜಿ ಅಧ್ಯಕ್ಷರಾದ ಸಿಎ ಎಸ್​.ಬಿ. ಶೆಟ್ಟಿ, ಜೆ.ಕೆ. ಶೆಟ್ಟಿ, ಭುಜಂಗ ಶೆಟ್ಟಿ, ಬಿ.ಸಿ. ಶೆಟ್ಟಿ, ಮಹೇಶ ಶೆಟ್ಟಿ, ಸುಧಾಕರ ಶೆಟ್ಟಿ, ರತ್ನಾಕರ ಶೆಟ್ಟಿ, ದಿನೇಶ ಶೆಟ್ಟಿ, ರಾಜೇಂದ್ರ ಶೆಟ್ಟಿ, ಇತರರು ಇದ್ದರು. ಪ್ರದಿಪ ಟಿ. ಪಕ್ಕಳ ಸ್ವಾಗತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net