ಎಲ್​ಪಿಜಿ ಅಭಾವದಿಂದ ಘಟಕಗಳು ಬಂದ್​

ಎಲ್​ಪಿಜಿ ಘಟಕ ಬಂದ್​
ಎಲ್​ಪಿಜಿ ಘಟಕ ಬಂದ್​
Published on
ಧಾರವಾಡ: ಗ್ಯಾಸ್​ ಸಿಲಿಂಡರ್​ ಅಭಾವದ ಬೆನ್ನಲ್ಲೇ ನಗರದಲ್ಲಿ ಆಟೋ ಎಲ್​ಪಿಜಿ ಅಭಾವ ಉಂಟಾಗಿದೆ. ವಾಣಿಜ್ಯ ಗ್ಯಾಸ್​ ಸಿಲಿಂಡರ್​ ಅಭಾವದಿಂದ ಇಲ್ಲಿನ ಅನೇಕ ಹೋಟೆಲ್​ಗಳು ಬಂದ್​ ಆಗಿವೆ. ಇದೀಗ ಆಟೋ ಎಲ್​ಪಿಜಿ ಸಿಗದೆ ಘಟಕಗಳನ್ನು ಬಂದ್​ ಮಾಡಲಾಗಿದೆ.
ನಗರದ ಹೊಸಯಲ್ಲಾಪುರ ಮುಖ್ಯ ರಸ್ತೆಯ ಸೂಪರ್​ ಗ್ಯಾಸ್​ ಘಟಕವನ್ನು ಬಂದ್​ ಮಾಡಿ "ನೋ ಸ್ಟಾಕ್​ ಲಕ' ಹಾಕಲಾಗಿದೆ. ಅದೇರೀತಿ ಓಲ್ಡ್​ ಎಸ್​ಪಿ ಸರ್ಕಲ್​ನ ಘಟಕವೂ ಬಂದ್​ ಆಗಿದೆ. ಇದರಿಂದ ಆಟೋ ಚಾಲಕರು ಪರದಾಡುವಂತಾಗಿದೆ.
ಮೈತ್ರಿ ಪ್ಯಾಲೇಸ್​ ಎದುರಿನ ರಿಲಯನ್ಸ್​ ಬಂಕ್​ನಲ್ಲಿ ಎಲ್​ಪಿಜಿ ಲಭ್ಯವಿದೆ. ಆದರೆ, ಎಲ್​ಪಿಜಿ ಬರಿಸಿಕೊಳ್ಳಲು ಗಂಟೆಗಟ್ಟಲೇ ವಾಹನಗಳು ಸರದಿಯಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಇದೆ. ಇನ್ನು ಲಭ್ಯವಿರುವ ಎಲ್​ಪಿಜಿ ಗ್ಯಾಸ್​ ಬಂಕ್​ಗಳಲ್ಲಿ ಒಂದೊಂದೆಡೆ ಒಂದೊಂದು ದರ ನಿಗದಿಪಡಿಸಲಾಗಿದೆ ಎಂದು ಆಟೋ ಚಾಲಕರು ಅಲವತ್ತುಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net