building nirman ನಿರ್ಮಾಣ- 2 ಇನ್ನೂ ಪ್ರಾರಂಭವಾಗಿಲ್ಲ

building nirman ಸುರೇಶ ಕಿರೇಸೂರ.
building nirman ಸುರೇಶ ಕಿರೇಸೂರ.
Published on

ಪ್ರಮುಖ ಮುಖ್ಯಾಂಶಗಳು

  • ಕಟ್ಟಡ ಪರವಾನಗಿ ಸಿಗದೇ ಸಾರ್ವಜನಿಕರಿಗೆ ತೊಂದರೆ
  • ಕಟ್ಟಡ ಪರವಾನಗಿ ಸಾವಿರಾರು ಅರ್ಜಿಗಳು ಬಾಕಿ
ಹುಬ್ಬಳ್ಳಿ: building nirman ರಾಜ್ಯದಲ್ಲಿ ಕಟ್ಟಡ ಪರವಾನಗಿ ನಿರ್ಮಾಣ 2 ಸ್ಥಗಿತಗೊಂಡು ಹಲವು ದಿನಗಳು ಕಳೆದಿದ್ದು, ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕನ್ಸಲ್ಟಿಂಗ್​ ಸಿವಿಲ್​ ಇಂಜಿನಿಯರ್ಸ್​ ಅಸೋಸಿಯೇಶನ್​ ಮಾಜಿ ಅಧ್ಯಕ್ಷ ಸುರೇಶ ಕಿರೇಸೂರ ದೂರಿದ್ದಾರೆ.
ನಿರ್ಮಾಣ 2 ಸ್ಥಗಿತಗೊಂಡ ಬಗ್ಗೆ ದೂರುಗಳನ್ನು ಸರ್ಕಾರದ ಅಧಿಕಾರಿಗಳು, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿತ್ತು. ರಾಜ್ಯದ ಇಂಜಿನಿಯರ್​ಗಳು ಸೇರಿ ಸಮಸ್ಯೆ ಬಗೆ ಹರಿಸುವಂತೆ ಕೋರಿದ್ದರು.
ಈಗಾಗಲೇ ಸಾವಿರಾರು ಅರ್ಜಿಗಳು ಕಟ್ಟಡ ಪರವಾನಗಿಗೆ ಸಂಬಂಧಿಸಿ ಬಾಕಿ ಉಳಿದಿವೆ. ತಂತ್ರಾಂಶ ತೊಂದರೆಯಿಂದಾಗಿ ಸಾರ್ವಜನಿಕರು ಬಹಳಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಟ್ಟಡ ಪರವಾನಗಿ ಸಿಗದೇ ಮನೆ ಕಟ್ಟುವ ಮಾಲೀಕರಷ್ಟೇ ಅಲ್ಲ ಕಟ್ಟಡ ಕಾರ್ಮಿಕರು ಸಹ ತೊಂದರೆಗೆ ಸಿಲುಕುತ್ತಿದ್ದಾರೆ. ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡು ಆರ್ಥಿಕತೆಗೆ ಹೊಡೆತ ಬೀಳುತ್ತಿದೆ. ಹಾಗಾಗಿ ನಿರ್ಮಾಣ 2 ಇದರಲ್ಲಿರುವ ತಾಂತ್ರಿಕ ತೊಂದರೆ ನಿವಾರಿಸಿ ಪರಿಹಾರ ಒದಗಿಸಬೇಕೆಂದು ಕಿರೇಸೂರ ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net