ಕೊಲ್ಲಾಪುರದ ಮೂವರ ಬಂಧನ

ಸಂಕೇತ್​ ಯಾದವ್​, ಸಿದ್ದೇಶ ಭೋಸಲೆ, ವೈಭವ ಚವಾಣ್
ಸಂಕೇತ್​ ಯಾದವ್​, ಸಿದ್ದೇಶ ಭೋಸಲೆ, ವೈಭವ ಚವಾಣ್
Published on
ಧಾರವಾಡ: ಟಿಬೆಟ್​ ಮೂಲದ ಬೌದ್ಧ ಸನ್ಯಾಸಿ ತಾಶಿ ಧೊಂಡುಪ್​ (40) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಗುಂಜನ್​ ಆರ್ಯ ತಿಳಿಸಿದರು.
ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಭುದರ್​ಗಡ್​ನ ಸಂಕೇತ್​ ಯಾದವ್​ (24), ಸಿದ್ದೇಶ ಭೋಸಲೆ (18), ವೈಭವ ಚವಾಣ್​ (30) ಬಂಧಿತ ಆರೋಪಿಗಳು. ಏ. 29ರಂದು ಹು&ಧಾ ಬೈಪಾಸ್​ನ ಹಳಿಯಾಳ ರಸ್ತೆಯ ಕೆಳ ಸೇತುವೆ ಬಳಿ ತಾಶಿ ಧೋಂಡುಪ್​ ಶವ ಪತ್ತೆಯಾಗಿತ್ತು. ಸ್ಥಳಿಯರಿಂದ ಅಪಘಾತವಾಗಿರುವ ಮಾಹಿತಿ ಬಂದಿತ್ತು. ಸ್ಥಳ ಪರಿಶೀಲನೆ ಮಾಡಿದಾಗ ಮೃತನ ದೇಹದ ಮೇಲೆ ಹಲ್ಲೆಯ ಗಾಯಗಳಿದ್ದವು. ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀೆ ನಡೆಸಲಾಗಿತ್ತು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು ಎಂದರು.
ಮೃತ ತಾಶಿ ಧೊಂಡುಪ್​ ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ಕ್ಯಾಂಪ್​ನಲ್ಲಿ ಬೌದ್ಧ ಸನ್ಯಾಸಿಯಾಗಿದ್ದರು. ಏ. 29ರಂದು ಐವರು ಆರೋಪಿಗಳು ಹಣದ ಆಸೆಗಾಗಿ ತಾಶಿ ಧೊಂಡುಪ್​ನನ್ನು ಕಾರ್​ನಲ್ಲಿ ಅಪಹರಣ ಮಾಡಿದ್ದರು. ಕಾಲಿಗೆ ಹಗ್ಗ ಕಟ್ಟಿ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ನಂತರ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಮೃತದೇಹ ಎಸೆದು ಹೋಗಿದ್ದರು. ತಾಂತ್ರಿಕ ಹಾಗೂ ವೈಜ್ಞಾನಿಕ ಸಾಾಧಾರಗಳ ನೆರವಿನಿಂದ ಮೂವರನ್ನು ಕೊಲ್ಲಾಪುರದ ಭುದರ್​ಗಡ್​ನಲ್ಲಿ ಬಂಧಿಸಲಾಗಿದೆ. ಪ್ರಕರಣ ಭೇದಿಸಲು ಉತ್ತರ ಕನ್ನಡ ಜಿಲ್ಲಾ ಪೊಲೀಸ್​, ಮಹಾರಾಷ್ಟ್ರ ಪೊಲೀಸರು ಸಹಕರಿಸಿದ್ದಾರೆ. ಪ್ರಕರಣದಲ್ಲಿ ಇನ್ನಿಬ್ಬರು ಭಾಗಿಯಾಗಿದ್ದು, ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಎಸ್​ಪಿ ಗುಂಜನ್​ ಆರ್ಯ ತಿಳಿಸಿದರು.
ಹಣಕ್ಕಾಗಿ ಅಪಹರಿಸಿ ಕೊಲೆ
ಐವರು ಆರೋಪಿಗಳಲ್ಲಿ ಕೆಲವರು ಕಬ್ಬು ಕಡಿಯುವ ಗ್ಯಾಂಗ್​ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಬರುತ್ತಿದ್ದರು. ಅದರಲ್ಲೊಬ್ಬ ಬೌದ್ಧ ಬಿಕ್ಕುಗಳ ಬಳಿ ಸಾಕಷ್ಟು ಹಣವಿರುತ್ತದೆ ಎಂದು ಹೇಳಿದ್ದ. ಏ. 28ರಂದು ಮುಂಡಗೋಡಕ್ಕೆ ಬಂದಿದ್ದ ಆರೋಪಿಗಳು ಬೌದ್ಧ ಬಿಕ್ಕುಗಳನ್ನು ಹುಡುಕುತ್ತಿದ್ದರು. ರಾತ್ರಿ 11 ಗಂಟೆ ಸುಮಅರಿಗೆ ಒಬ್ಬನೇ ವಾಕಿಂಗ್​ ಮಾಡುತ್ತಿದ್ದ ತಾಶಿ ಧೊಂಡೂಪ ಇವರಿಗೆ ಸಿಕ್ಕಿದ್ದ. ಹಗ್ಗದಿಂದ ಆತನ ಕಾಲು ಕಟ್ಟಿ ಕಾರ್​ನಲ್ಲಿ ಅಪಹರಿಸಿದ್ದಾರೆ. ಆತನ ಬಳಿ ಹಣ ಇಲ್ಲದ್ದರಿಂದ ಸಿಟ್ಟಿಗೆದ್ದು ಮಾರಣಾಂತಿಕವಾಗಿ ಥಳಿಸಿದ್ದಾರೆ. ಮೂಗು ಹಾಗೂ ಕುತ್ತಿಗೆ ಭಾಗಕ್ಕೆ ಪೆಟ್ಟು ತಗುಲಿ ತಾಶಿ ಕಾರಿನಲ್ಲಿ ಮೃತಪಟ್ಟಿದ್ದಾನೆ. ಗಾಬರಿಗೊಂಡ ಆರೋಪಿಗಳು ಧಾರವಾಡ ಕಡೆ ಬಂದು ಮೃತದೇಹ ಎಸೆದುಹೋಗಿದ್ದರು ಎಂದು ಎಸ್​ಪಿ ಗುಂಜನ್​ ಆರ್ಯ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net