ಅಣ್ಣನಿಂದ ತಂಗಿಯ ಕೊಲೆ

ಶಿವಲೀಲಾ ಸಂಗೊಳ್ಳಿ
ಶಿವಲೀಲಾ ಸಂಗೊಳ್ಳಿ
Published on
ಧಾರವಾಡ: ಆಸ್ತಿಯ ವಿಚಾರವಾಗಿ ವ್ಯಕ್ತಿಯೊಬ್ಬ ತನ್ನ ತಂಗಿಯನ್ನು ಕುಡಗೋಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಟನೆ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ. ಶಿವಲೀಲಾ ಈಶ್ವರ ಸಂಗೊಳ್ಳಿ (32) ಕೊಲೆಯಾದ ಮಹಿಳೆಯಾಗಿದ್ದು, ಅಣ್ಣ ಹನಮಂತ ಯಲಿವಾಳ (35) ಕೊಲೆ ಆರೋಪಿ.
ಶಿವಲೀಲಾಳನ್ನು ತಡಕೋಡದ ಸಂಗೊಳ್ಳಿ ಮನೆತನಕ್ಕೆ ಮದುವೆ ಮಾಡಿಕೊಡಲಾಗಿತ್ತು. ಕಾರಣಾಂತರಗಳಿಂದ ಗಂಡನ ಮನೆ ಬಿಟ್ಟು ತವರು ಮನೆಯಲ್ಲಿ ವಾಸವಾಗಿದ್ದಳು. ಪಿತ್ರಾಜಿರ್ತ ಆಸ್ತಿಯ ವಿಚಾರವಾಗಿ ಅಣ್ಣ ಹನಮಂತ ಯಲಿವಾಳ ಜತೆ ಆಗಾಗ ಜಗಳ ನಡೆಯುತ್ತಿತ್ತು. ಯುಗಾದಿ ಇದ್ದುದರಿಂದ ಶಿವಲೀಲಾ ಗುರುವಾರ ಬೆಳಗ್ಗೆ ಜಮೀನು ಪೂಜೆಗೆ ಹೋಗಿದ್ದಳು. ಅಲ್ಲಿಗೆ ಬಂದ ಅಣ್ಣ ಹನಮಂತ ತಂಗಿಯ ಜತೆ ಜಗಳವಾಡಿ ಕುಡಗೋಲಿನಿಂದ ಹಲ್ಲೆ ಮಾಡಿದ್ದಾನೆ. ತೀವ್ರ ಗಾಯಗೊಂಡ ಶಿವಲೀಲಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಗುಂಜನ್​ ಆರ್ಯ ಹಾಗೂ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಆರೋಪಿ ಹನಮಂತ ಯಲಿವಾಳ ಎಂಬಾತನನ್ನು ಬಂಧಿಸಲಾಗಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net