ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಎಐ ಸ್ವತಃ ಯೋಚಿಸುವುದಿಲ್ಲ, ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಮುನ್ಸೂಚನೆ (ಪ್ರಿಡಿಕ್ಶನ್) ನೀಡುತ್ತದೆ. ಮಾನವ ಚಿಂತನೆ ಮತ್ತು ಎಐ ನಡುವಿನ ವ್ಯತ್ಯಾಸವನ್ನು ವಿವರಿಸಿದ ಅವರು, ಉತ್ತಮ ನಿರ್ಧಾರ ಕೈಗೊಳ್ಳಲು ಎಐ ಪರಿಣಾಮಕಾರಿ ಸಾಧನವಾಗಿದ್ದು, ವಿದ್ಯಾರ್ಥಿಗಳು ಕುತೂಹಲ, ಕಲಿಯುವ ಹಂಬಲ ಹಾಗೂ ಗೆಲ್ಲುವ ಛಲವನ್ನು ಬೆಳೆಸಿಕೊಳ್ಳಬೇಕು ಎಂದರು.