ಬೆಂಗಳೂರಿನಲ್ಲಿ ನಡೆದ ಆಪ್ಟಿಟ್ಯೂಡ್ ಟೆಸ್ಟ್, ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನದ ಸುತ್ತುಗಳನ್ನು ಒಳಗೊಂಡ ಕಠಿಣ ಆಯ್ಕೆ ಪ್ರಕ್ರಿಯೆಯಲ್ಲಿ ಪುನೀತ್ ಉತ್ತೀರ್ಣರಾಗಿದ್ದಾರೆ. ಬ್ರೈಟ್ ಬಿಜಿನೆಸ್ ಸ್ಕೂಲ್ನ ನಿರ್ದೇಶಕ ಡಾ. ಪ್ರಸಾದ ರೂಡಗಿ ಮತ್ತು ಉದ್ಯೋಗ ಅಧಿಕಾರಿ ಯೋಗೇಶ ಕುಮಾರ ಅವರು ಪುನೀತ್ ಅವರಿಗೆ ಆಫರ್ ಲೆಟರ್ ಹಸ್ತಾಂತರಿಸಿದರು.