bright MBA ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದೇ ನಾವೀನ್ಯ

bright MBA ಹುಬ್ಬಳ್ಳಿಯ ಬ್ರೈಟ್ ಬಿಜಿನೆಸ್​ ಸ್ಕೂಲ್​ನಲ್ಲಿ ಐಕ್ರಿಯೇಟ್​ ಎಂಟರ್​ಪ್ರೆನ್ಯೂರ್​ಶಿಪ್​ ಉದ್ಘಾಟಿಸಲಾಯಿತು. ಪ್ರೊ. ಜೈದೀಪ ಪ್ರಭು, ಡಾ. ಪ್ರಸಾದ ರೂಡಗಿ, ಸಂತೋಷ ಹುರಳಿಕೊಪ್ಪಿ, ಡಾ. ವಿ.ಎಂ. ಕೊರವಿ, ಪಲ್ಲವಿ, ಇತರರು ಇದ್ದರು.
bright MBA ಹುಬ್ಬಳ್ಳಿಯ ಬ್ರೈಟ್ ಬಿಜಿನೆಸ್​ ಸ್ಕೂಲ್​ನಲ್ಲಿ ಐಕ್ರಿಯೇಟ್​ ಎಂಟರ್​ಪ್ರೆನ್ಯೂರ್​ಶಿಪ್​ ಉದ್ಘಾಟಿಸಲಾಯಿತು. ಪ್ರೊ. ಜೈದೀಪ ಪ್ರಭು, ಡಾ. ಪ್ರಸಾದ ರೂಡಗಿ, ಸಂತೋಷ ಹುರಳಿಕೊಪ್ಪಿ, ಡಾ. ವಿ.ಎಂ. ಕೊರವಿ, ಪಲ್ಲವಿ, ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂಬ್ರಿಡ್ಜ್​ ವಿವಿಯ ಜೈದೀಪ ಪ್ರಭು ಅನಿಸಿಕೆ
  • ಬ್ರೈಟ್ ನಲ್ಲಿ ಐಕ್ರಿಯೇಟ್​ ಎಂಟರ್​ಪ್ರೆನ್ಯೂರ್​ಶಿಪ್​ ಉದ್ಘಾಟನೆ
ಹುಬ್ಬಳ್ಳಿ: bright MBA ಕೇವಲ ವ್ಯವಹಾರಗಳನ್ನು ಪ್ರಾರಂಭಿಸುವುದು ಉದ್ಯಮಶೀಲತೆಯಾಗುವುದಿಲ್ಲ ಬದಲಾಗಿ, ಪ್ರಾಯೋಗಿಕ, ಕೈಗೆಟುಕುವ ಮತ್ತು ಎಲ್ಲರನ್ನೂ ಒಳಗೊಳ್ಳುವ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸುವುದಾಗಿದೆ ಎಂದು ಯುಕೆ ಕೇಂಬ್ರಿಡ್ಜ್​ ವಿಶ್ವವಿದ್ಯಾಲಯ ಮಾರ್ಕೆಟಿಂಗ್​ ಪ್ರಾಧ್ಯಾಪಕ ಜೈದೀಪಪ್ರಭು ಹೇಳಿದರು.
ಇಲ್ಲಿಯ ಗೋಕುಲ ರಸ್ತೆ ಬ್ರೈಟ್ ಬಿಜಿನೆಸ್​ ಸ್ಕೂಲ್​ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಐಕ್ರಿಯೇಟ್​ ಎಂಟರ್​ಪ್ರೆನ್ಯೂರ್​ಶಿಪ್​ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎನ್​ಎಸ್​ ಇನ್ಫೋಟೆಕ್​ ಸಿಇಒ ಸಂತೋಷ ಹುರಳಿಕೊಪ್ಪಿ ಮಾತನಾಡಿ, ಬ್ರೈಟ್​ ಬಿಜಿನೆಸ್​ ಸ್ಕೂಲ್​ ಐಕ್ರಿಯೇಟ್​ ಉದ್ಯಮಶೀಲತಾ ಕೋಶವನ್ನು ಸ್ಥಾಪಿಸುವಲ್ಲಿ ತೆಗೆದುಕೊಂಡ ಚಿಂತನಶೀಲ ಉಪಕ್ರಮ ಮೆಚ್ಚುವಂತದ್ದು ಎಂದರು.
ಬ್ರೈಟ್​ ಬಿಜಿನೆಸ್​ ಸ್ಕೂಲ್​ ನಿರ್ದೇಶಕ ಡಾ. ಪ್ರಸಾದ ರೂಡಗಿ ಮಾತನಾಡಿ, ವಿದ್ಯಾರ್ಥಿಗಳು ಉದ್ಯಮಿಯಾಗುವ ಕನಸು ಕಾಣಬೇಕು ಮತ್ತು ಸಮಾಜಕ್ಕೆ ಕೊಡುಗೆ ನೀಡಬೇಕು. ಐಕ್ರಿಯೇಟ್​ ಉದ್ಯಮಶೀಲತಾ ಕೋಶವು ವಿದ್ಯಾರ್ಥಿಗಳಲ್ಲಿ ನಾವೀನ್ಯ ನಾಯಕತ್ವ ಮತ್ತು ಉದ್ಯಮಶೀಲತಾ ಮನೋಭಾವವನ್ನು ಬೆಳೆಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.
"ಲೀನ್​ ಸ್ಪಾರ್ಕ್​-ಪ್ರುಗಲ್​ ಬೈ ಡಿಸೈನ್​, ಗ್ಲೋಬಲ್​ ಇನ್​ ಇಂಪ್ಯಾಕ್ಟ್​' ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಕರ್ನಾಟಕ ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಡಿ.ಸಿ. ಪಾವಟೆ ಪ್ರತಿಷ್ಠಾನದ ಸಂಯೋಜಕ ಡಾ. ಬಿ.ಎಚ್​. ನಾಗೂರ ಅತಿಥಿಯಾಗಿದ್ದರು. ಡಾ. ವಿ.ಎಂ. ಕೊರವಿ, ಡಾ. ವೀರಣ್ಣ ಡಿ.ಕೆ., ಸಹ ಪ್ರಾಧ್ಯಾಪಕ ಅಮಿತ ಅಂಗಡಿ ಉಪಸ್ಥಿತರಿದ್ದರು.
ಎಂಬಿಎ ವಿದ್ಯಾರ್ಥಿಗಳಾದ ಪದ್ಮಾವತಿ ಸಿಂಗ್​ ಮತ್ತು ಅನುಷ್ಕಾ ಬಿರಾಜ್​ದಾರ್​ ಕಾರ್ಯಕ್ರಮ ನಿರ್ವಹಿಸಿದರು. ರಶ್ಮಿತಾ, ಅರುಂಧತಿ ಕಡೇಲಿ ಅತಿಥಿಗಳನ್ನು ಪರಿಚಯಿಸಿದರು. ದಿವ್ಯಾ ಮುರ್ಡೇಶ್ವರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net