bright college ಓದಿದರೆ ವಿಕಾಸ, ಇಲ್ಲದಿರೆ ವಿಕಾರ

ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ bright college ಬ್ರೈಟ್ ಬಿಜಿನೆಸ್ ಸ್ಕೂಲ್‌ನ ಎಂಬಿಎ ವಿದ್ಯಾರ್ಥಿಗಳ ಪ್ರಥಮ ಪದವಿ ಪ್ರದಾನ ಸಮಾರಂಭವನ್ನು ಪ್ರೊ.ಸಿ.ಎಂ. ತ್ಯಾಗರಾಜ, ಎಂ.ವಿ. ಕರಮರಿ ಉದ್ಘಾಟಿಸಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ bright college ಬ್ರೈಟ್ ಬಿಜಿನೆಸ್ ಸ್ಕೂಲ್‌ನ ಎಂಬಿಎ ವಿದ್ಯಾರ್ಥಿಗಳ ಪ್ರಥಮ ಪದವಿ ಪ್ರದಾನ ಸಮಾರಂಭವನ್ನು ಪ್ರೊ.ಸಿ.ಎಂ. ತ್ಯಾಗರಾಜ, ಎಂ.ವಿ. ಕರಮರಿ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ ಅಭಿಪ್ರಾಯ
ಹುಬ್ಬಳ್ಳಿ: ವಿದ್ಯಾರ್ಥಿಗಳು bright college ನಿರಂತರ ಓದುತ್ತಿರಬೇಕು. ಇದರಿಂದ ವಿಕಾಸ ತಾನಾಗಿಯೇ ಆವಿರ್ಭವಿಸುತ್ತದೆ. ಇಲ್ಲದಿದ್ದರೆ ಬುದ್ಧಿ ವಿಕಾರ ಹೊಂದುತ್ತದೆ ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ ಅಭಿಪ್ರಾಯಪಟ್ಟರು.
ಇಲ್ಲಿಯ ಹೋಟೆಲ್ ಡೆನಿಸನ್ಸ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಬ್ರೈಟ್ ಬಿಜಿನೆಸ್ ಸ್ಕೂಲ್‌ನ ಎಂಬಿಎ ವಿದ್ಯಾರ್ಥಿಗಳ ಪ್ರಥಮ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ (ಎಐ) ಬಂದಿದೆ. ಮುಂದೆ ಸಿಂಥೆಟಿಕ್ ಇಂಟೆಲಿಜೆನ್ಸಿ (ಎಸ್‌ಐ) ಬರಲಿದೆ. ಇದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಓದಿನತ್ತ ತೊಡಗಬೇಕು. ಇಲ್ಲವಾದರೆ ಸ್ಪರ್ಧಾತ್ಮಕ ಜಗತ್ತಿಗೆ ತಮ್ಮನ್ನು ತಾವು ಒಡ್ಡಿಕೊಳ್ಳಲು ಆಗುವುದಿಲ್ಲ ಎಂದರು.
ನವೋದ್ಯಮ, ತಂತ್ರಜ್ಞಾನ, ಸಾಮಾಜಿಕ ಹೊಣೆಗಾರಿಕೆ ವಿದ್ಯಾರ್ಥಿಗಳಲ್ಲಿ ಇಲ್ಲದಿದ್ದರೆ ಅವರೆಲ್ಲ ಹೊರಜಗತ್ತಿನಲ್ಲಿ ಇದ್ದಂತೆ (ಔಟ್‌ಡೇಟೆಡ್). ಓದುವಾಗಲೇ ಆಧುನಿಕ ಜಗತ್ತಿಗೆ ತಮ್ಮನ್ನು ತಾವು ತೆರೆದುಕೊಳ್ಳಬೇಕು. ಇದರಿಂದ ಅತ್ಯುತ್ತಮ ಉದ್ಯೋಗಿ ಅಥವಾ ಉದ್ಯೋಗದಾತರಾಗಲು ಸಾಧ್ಯ ಎಂದರು.
ಕರ್ನಾಟಕ ಕನ್ವೇಯರ್ಸ್ ಆ್ಯಂಡ್ ಸಿಸ್ಟಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ವಿ. ಕರಮರಿ ಮಾತನಾಡಿ, ಸದ್ಯ ಭಾರತವು ಯುವಕರ ದೇಶ. ಅಲ್ಲದೆ ಅವಕಾಶವೂ ಬಹಳ ಇದೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತಕ್ಕೆ ಯುವಕರ ಕೊಡುಗೆ ಅಗತ್ಯವಾಗಿದೆ. ಭಾರತವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತಾಗಲು ಶ್ರಮ ಬೇಕಿದೆ ಎಂದರು.
ಬ್ರೈಟ್ ಬಿಜಿನೆಸ್ ಸ್ಕೂಲ್ ಅಧ್ಯಕ್ಷ ಪ್ರೊ. ಗುರುನಾಥ ಹಳ್ಯಾಳ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಡಾ. ಪ್ರಸಾದ ರೂಢಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಾಲ್ವರು ಚಿನ್ನ ಮತ್ತು ನಾಲ್ವರು ಬೆಳ್ಳಿ ಪದಕಗಳನ್ನು ವಿದ್ಯಾರ್ಥಿಗಳು ಪಡೆದರು. ಒಟ್ಟು 120 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಅಲ್ಲದೆ ವಿದ್ಯಾರ್ಥಿಗಳಿಗೆ ವಿವಿಧ ವಿಭಾಗದ ಸಾಧನೆ ಗುರುತಿಸಿ ಪದಕ ಹಾಗೂ ಪ್ರಮಾಣ ಪತ್ರ ನೀಡಲಾಯಿತು.
ಪ್ರಮುಖರಾದ ಡಾ. ಶಂಕರಗೌಡ್ರ ಲಕ್ಕನಗೌಡ್ರ, ಬಸವರಾಜ ಲಿಂಗಶೆಟ್ಟರ್, ಪ್ರೊ. ಮಹಾಂತೇಶ ಕುರಿ, ಪ್ರೊ. ಮೊಯಿಜಾ ನಿಂಬಾಳ್ಕರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net