braille day ಮಜೇಥಿಯಾದಿಂದ ಬ್ರೈಲ್​ ದಿನಾಚರಣೆ

braille day ಹುಬ್ಬಳ್ಳಿಯ ಆನಂದನಗರ ಅಂಧ ಮಕ್ಕಳ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಬ್ರೈಲ್​ ದಿನಾಚರಣೆಯಲ್ಲಿ ಹಿರಿಯ ಸಿವಿಲ್​ ನ್ಯಾಯಾಧೀಶ ಪರಶುರಾಮ ದೊಡ್ಡಮನಿ, ಮಾಜಿ ವಿಧಾನ ಪರಿಷತ್​ ಸದಸ್ಯ ಮೋಹನ ಲಿಂಬಿಕಾಯಿ, ಮಜೇಥಿಯಾ ಫೌಂಡೇಶನ್​ ಚೇರ್ಮನ್​ ಜಿತೇಂದ್ರ ಮಜೇಥಿಯಾ, ಸವಿತಾ ಕಾಳೆ, ಆಶಿಶ್​ ಕುಮಾರ, ರಾಜಕುಮಾರ ಸಾಬೋಜಿ, ಗುರುಸಿದ್ದೇಶ್ವರ ಲಕ್ಕುಂಡಿ, ಅಮರೇಶ ಹಿಪ್ಪರಗಿ, ಡಾ. ಸುನೀಲಕುಮಾರ ಕುಕ್ಕನೂರ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಅಂಧ ಮಕ್ಕಳಿಗೆ ಸೌಲಭ್ಯ ವಿತರಣೆ
ಹುಬ್ಬಳ್ಳಿ: braille day ಇಲ್ಲಿಯ ಆನಂದನಗರ ಸರ್ಕಾರಿ ಅಂಧ ಮಕ್ಕಳ ಶಾಲೆಯಲ್ಲಿ ಶುಕ್ರವಾರ ಮಜೇಥಿಯಾ ಫೌಂಡೇಷನ್​, ಜಿಲ್ಲಾಡಳಿತದ ಸಹಯೋಗದಲ್ಲಿ ವಿಶ್ವ ಬ್ರೈಲ್​ ದಿನ ಆಚರಿಸಲಾಯಿತು.
ಸಮಾರಂಭ ಉದ್ಘಾಟಿಸಿದ ಮಾಜಿ ಎಂಎಲ್​ಸಿ ಮೋಹನ ಲಿಂಬಿಕಾಯಿ, ಅಂಗವಿಕಲತೆ ಎಂಬುದು ಅಸಮರ್ಥತೆಯಲ್ಲ, ಮಹತ್ವದ ಸಾಧನೆಗೆ ದೇವರು ಕೊಟ್ಟ ವರದಾನ. ಬ್ರೈಲ್​​ ಲಿಪಿ ಬಂದ ನಂತರ ಎಲ್ಲ ಕ್ಷೇತ್ರದಲ್ಲಿ ಅಂಗವಿಕಲರು ಸಾಧನೆ ಮಾಡುತ್ತಿದ್ದಾರೆ ಎಂದರು.
ಹಿರಿಯ ಸಿವಿಲ್​ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಮಾತನಾಡಿ, ಪಂ. ಪುಟ್ಟರಾಜ ಗವಾಯಿಗಳು ನಮ್ಮ ಮಧ್ಯದ ಶ್ರೇಷ್ಠ ವ್ಯಕ್ತಿ. ಅಂಗವಿಕಲರಿಗೆ ಸಂವಿಧಾನದಲ್ಲಿ ಸಮಾನ ಅವಕಾಶವನ್ನು ಕಲ್ಪಿಸಲಾಗಿದೆ. ಅವರಿಗೆ ಎಲ್ಲರೂ ಗೌರವ ಕೊಡಬೇಕು. ಕೀಳರಿಮೆಯನ್ನು ತೊರೆದು ಬೆಳೆಯಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಮಾತನಾಡಿ, ಸೇವಾ ಮನೋಭಾವದ ಜಿತೇಂದ್ರ ಮಜೇಥಿಯಾ ಅವರು ಅನೇಕ ಅಂಧರ ಬಾಳಿಗೆ ಬೆಳಕಾಗಿದ್ದಾರೆ, ಸೇವೆಯಿಂದ ಅಂಗವಿಕಲರ ಹಿತ ಬಯಸುತ್ತಿರುವುದಕ್ಕೆ ನಾವು ಅವರಿಗೆ ಆಭಾರಿಯಾಗಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಫೌಂಡೇಷನ್​ ಚೇರ್ಮನ್​ ಜಿತೇಂದ್ರ ಮಜೇಥಿಯಾ ಮಾತನಾಡಿ, ಅಂಗವಿಕಲರು ಲಭ್ಯ ಸೌಲಭ್ಯಗಳನ್ನು ಬಳಸಿಕೊಂಡು ಸಾಧನೆ ಮಾಡಬಹುದು. ನಮ್ಮ ಸಂಸ್ಥೆಯು ಎಲ್ಲ ರೀತಿಯ ಸಹಕಾರ, ಪ್ರೋತ್ಸಾಹ ನೀಡಲಿದೆ. ನಿರಂತರ ಸೇವೆ ಮಾಡಲು ಸಿಕ್ಕ ಅವಕಾಶ ಇದಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net