ಹುಬ್ಬಳ್ಳಿ: ಗೆಳೆಯರೊಂದಿಗೆ ಆಟವಾಡಲು ಹೋಗಿ ಕಣ್ಮರೆಯಾಗಿದ್ದ ಬಾಲಕ (DEATH) ಶವವಾಗಿ ಪತ್ತೆಯಾದ ವಿಜಯನಗರದಲ್ಲಿ ನಡೆದಿದೆ. ಆಜಾದ್ ನಗರದ ಬಾಲಾಜಿ (9) ಮೃತ ಬಾಲಕ. ಸ್ನೇಹಿತರೊಂದಿಗೆ ಆಟವಾಡುತ್ತಾ ವಿಜಯನಗರಕ್ಕೆ ಬಂದಿದ್ದ ಬಾಲಾಜಿ ಮನೆಯೊಂದರ ಕಾಂಪೌಂಡ್ ಒಳಗೆ ಬಿದ್ದಿದ್ದ ತೆಂಗಿನಕಾಯಿ ತೆಗೆದುಕೊಳ್ಳಲು ಹೋಗಿ, ಅಲ್ಲಿ ಪಿಲ್ಲರ್ ಹಾಕಲು ತೋಡಿದ್ದ ಗುಂಡಿಯಲ್ಲಿ ಬಿದ್ದಿದ್ದಾನೆ. ಆತನೊಂದಿಗೆ ಬಂದಿದ್ದ ಇಬ್ಬರು ಬಾಲಕರು ಹೆದರಿ ಪರಾರಿಯಾಗಿದ್ದರು. ಗುಂಡಿಯಲ್ಲಿ ಸಂಗ್ರಹವಾಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಯಾರಿಗೂ ಹೇಳದೆ ಸ್ನೇಹಿತರು ಸುಮ್ಮನಿದ್ದುದರಿಂದ ಮಗ ನಾಪತ್ತೆಯಾಗಿದ್ದಾನೆ ಎಂದು ಪಾಲಕರು ದೂರು ನೀಡಿದ್ದರು. ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಆಧರಿಸಿ ಪೊಲೀಸರು ಶವ ಪತ್ತೆ ಹಚ್ಚಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.