borewell ಹುಬ್ಬಳ್ಳಿಯ ಅಂಜುಮನ್ ಸಂಸ್ಥೆಯ ಖಬರಸ್ಥಾನದಲ್ಲಿ ಬೋರವೆಲ್ ಕೊರೆಯುವ ಕಾರ್ಯಕ್ರಮಕ್ಕೆ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಚಾಲನೆ ನೀಡಿದರು. ಸಿ.ಎಸ್. ಮೆಹಬೂಬ ಬಾಷಾ, ರೋಷನ್ ಜಮೀರ್ ಕುಂದಗೋಳ, ಚಾಂದ್ಬಾಷಾ, ಅಹ್ಮದ್ ಬಾಷಾ, ಇತರರು ಇದ್ದರು.
ಹುಬ್ಬಳ್ಳಿ: borewell ಇಲ್ಲಿಯ ಗವಿ ಓಣಿ ಮೊಹಲ್ಲಾ ಸಮೀಪದ ಅಂಜುಮನ್ ಸಂಸ್ಥೆಯ ದೊಡ್ಡ ಖಬರಸ್ಥಾನಕ್ಕೆ ಉಚಿತವಾಗಿ ಬೋರ್ವೆಲ್ ಕೊರೆಸಿ ಕೊಡಲಾಗಿದೆ. ಇಲ್ಲಿಯ ಶ್ರೀ ವೆಂಕಟೇಶ್ವರ ಬೋರವೆಲ್ಸ್ ವತಿಯಿಂದ ಖಬರಸ್ಥಾನದ ಗೇಟ್ ನಂ. 8ರಲ್ಲಿ ಕೊಳವೆ ಬಾವಿ ಕೊರೆಯಲಾಯಿತು.
ಬೋರವೆಲ್ಸ್ ಸಂಸ್ಥೆಯ ಪಾಲುದಾರ ಸಿ.ಎಸ್. ಮೆಹಬೂಬ್ ಬಾಷಾ ಮಾತನಾಡಿ, ಕಳೆದ ನಾಲ್ಕು ದಶಕದಿಂದ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿದ್ದು, ಪ್ರತಿ ವರ್ಷ ಸರ್ವಧರ್ಮಗಳ ಧಾರ್ಮಿಕ ಸ್ಥಳಗಳಲ್ಲಿ ಉಚಿತ ಕೊಳವೆ ಬಾವಿ ಕೊರೆಸುವ ಸೇವೆ ಮಾಡಲಾಗುತ್ತಿದೆ ಎಂದರು.
ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೋಷನ್ ಜಮೀರ್ ಕುಂದಗೋಳ ಕುರಾನ್ ಪಠಣ ಮಾಡಿದರು.