ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸಲು ಈ ಹಿಂದೆ ಪ್ರತಿ ಜಂಕ್ಶನ್ಗಳಲ್ಲಿ ಬೂಮ್ ಬ್ಯಾರಿಕೇಡ್ಗಳನ್ನು ನಿರ್ಮಿಸಲಾಗಿತ್ತು. ಇವು ಬಿಆರ್ಟಿಎಸ್ ಚಿಗರಿ ಬಸ್ ಬಂದಾಗ ಮಾತ್ರ ತೆರೆಯುತ್ತಿದ್ದವು. ಇದಕ್ಕಾಗಿ ಸಾಫ್ಟ್‌ವೇರ್ ಅಳವಡಿಸಲಾಗಿತ್ತು. ಬಸ್ಗಳಿಗೆ ಟ್ಯಾಗ್ ನೀಡಲಾಗಿತ್ತು. ಇದರ ಹೊರತು ಪೊಲೀಸ್ ವಾಹನಗಳು, ಆಂಬುಲನ್ಸ್ಗಳಿಗೆ ಕಂಪನಿ ವತಿಯಿಂದ ಟ್ಯಾಗ್ಗಳನ್ನು ನೀಡಲಾಗಿತ್ತು.