ಪುಸ್ತಕಗಳು ಮನುಷ್ಯನ ನೈಜ ಸಂಗಾತಿಗಳು

`ಬುಕ್ ಟಾಕ್' ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
`ಬುಕ್ ಟಾಕ್' ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
Published on
ಧಾರವಾಡ: ಪುಸ್ತಕಗಳು ಮನುಷ್ಯನ ನೈಜ ಸಂಗಾತಿಗಳು. ಅವು ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ, ಏಕಾಗ್ರತೆಗೆ, ಧನಾತ್ಮಕ ಚಿಂತನೆಗೆ ಸೂರ್ತಿ ತುಂಬುತ್ತವೆ ಎಂದು ಪ್ರೊ. ವೆಂಕಟೇಶ್ ಮುತಾಲಿಕ್ ಹೇಳಿದರು.
ನಗರದ ಜೆಎಸ್‌ಎಸ್ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗವು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ್‌ರ 75ನೇ ಜನ್ಮದಿನದ ಅಂಗವಾಗಿ ಬುಧವಾರ ಮಹಾವಿದ್ಯಾಲಯದ ಡಿ.ಆರ್.ಎಚ್. ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಅಂತರ್ ಮಹಾವಿದ್ಯಾಲಯದ `ಬುಕ್ ಟಾಕ್' ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಪಾಲ್ಗೊಂಡು ಅವರು ಮಾತನಾಡಿದರು. ಇಂದಿನ ತಾಂತ್ರಿಕ ಜಗತ್ತಿನಲ್ಲಿ ಓದುವ ಹವ್ಯಾಸ ಮರು ಜಾಗೃತಗೊಳಿಸುವ ನಿಟ್ಟಿನಲ್ಲಿ `ಬುಕ್ ಟಾಕ್' ಸ್ಪರ್ಧೆ ಅತ್ಯಂತ ಪ್ರಸ್ತುತವಾಗಿದೆ ಎಂದರು.
ಕೆಎಲ್‌ಇ ಸಂಸ್ಥೆಯ ಕಾಡಸಿದ್ದೇಶ್ವರ ಕಲಾ ಹಾಗೂ ಎಚ್.ಎಸ್. ಕೋತಂಬರಿ ವಿಜ್ಞಾನ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ದೇವದತ್ತ್ ವೈ, ಗದಗನ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಮಚಂದ್ರ ಹೆಗಡೆ ನಿರ್ಣಾಯಕರಾಗಿದ್ದರು. ಹು-ಧಾ ಅವಳಿ ನಗರದ 11 ಪದವಿ ಕಾಲೇಜುಗಳ 24 ಸ್ಪರ್ಧಾಳುಗಳು ಭಾಗವಹಿಸಿದ್ದರು. ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನ ಪ್ರಿಯಾಂಕ ಪ್ರಥಮ, ಧಾರವಾಡ ಕರ್ನಾಟಕ ಕಲಾ ಕಾಲೇಜಿನ ತಸ್ಮಿಯಾನೂರ್ ದ್ವಿತೀಯ, ಜೆಎಸ್‌ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ನಮಿತಾ ಕೆ. ತೃತೀಯ ಸ್ಥಾನ ಪಡೆದರು. ಪ್ರಾಧ್ಯಾಪಕಿ ಚೇತನಾ ಕೆ. ನಿರೂಪಿಸಿದರು.
ಸಂಸ್ಥೆಯ ಲಲಿತ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರವೀಣ ಕೊರ್ಲಹಳ್ಳಿ ಸ್ವಾಗತಿಸಿದರು. ತೇಜಸ್ವಿನಿ ನಾಯ್ಕ ಪರಿಚಯಿಸಿದರು. ವರ್ಷಾ ಕೆ. ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net