bond writers ದಸ್ತು ಬರಹಗಾರರ ಪ್ರತಿಭಟನೆ 16ರಂದು

bond writers ದಸ್ತು ಬರಹಗಾರರ ಸಂಘದ ಅಧ್ಯಕ್ಷ ಶಾಂತರಾಜ‌ ಪೋಳ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
bond writers ದಸ್ತು ಬರಹಗಾರರ ಸಂಘದ ಅಧ್ಯಕ್ಷ ಶಾಂತರಾಜ‌ ಪೋಳ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಳಗಾವಿಯಲ್ಲಿ ರಾಜ್ಯ ಮಟ್ಟದ ಹೋರಾಟ
  • ಪತ್ರ ಬರಹಗಾರರ ಬದುಕು ಬೀದಿಗೆ
ಹುಬ್ಬಳ್ಳಿ:bond writers ರಾಜ್ಯ ಸರ್ಕಾರದ ಡಿಜಿಟಲೀಕರಣ ವ್ಯವಸ್ಥೆಯಿಂದಾಗಿ ಸಾರ್ವಜನಿಕರು ಹಾಗೂ ಪತ್ರ (ದಸ್ತು) ಬರಹಗಾರರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಬೆಳಗಾವಿ ಸುವರ್ಣಸೌಧ ಎದುರು ಡಿ. 16ರಂದು ಬೃಹತ್​ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಧಾರವಾಡ ಜಿಲ್ಲಾ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ದಸ್ತು ಬರಹಗಾರರ ಟ್ರಸ್ಟ್​ ಅಧ್ಯಕ್ಷ ಶಾಂತರಾಜ ಪೋಳ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಡಿಜಟಲೀಕರಣ ಹೆಸರಿನಲ್ಲಿ ಮುಂದುವರಿದು ಕಾವೇರಿ 1, 2ರ ನಂತರ ಈಗ ಕಾವೇರಿ- 3 ತಂತ್ರಾಂಶ ಜಾರಿಗೆ ಮುಂದಾಗಿದೆ. ಇದರಿಂದ ಪತ್ರ ಬರಹಗಾರರ ಬದುಕು ಬೀದಿಗೆ ಬರಲಿದೆ ಎಂದು ನೋವು ತೋಡಿಕೊಂಡರು.
ಹೊಸ ತಂತ್ರಾಂಶದಲ್ಲಿ ಪೇಪರ್​ ಲೆಸ್​ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದರಿಂದ ದಸ್ತು ಬರಹಗಾರರಿಗೆ ತೊಂದರೆ ಮಾತ್ರವಲ್ಲ, ಸಾರ್ವಜನಿಕರು ಸುಲಭವಾಗಿ ಮೋಸ ಹೋಗಬಹುದಾಗಿದೆ. ಕಾನೂನುಬದ್ಧವಾಗಿ ಲೈಸನ್ಸ್​ ಪಡೆದು ಈ ವೃತ್ತಿ ಮಾಡುತ್ತಿದ್ದರೂ ಸರ್ಕಾರ ನಮ್ಮನ್ನು ಪರಿಗಣಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇರೆ ರಾಜ್ಯಗಳಂತೆ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್​ ನೀಡಬೇಕು, ನೋಂದಣಿ ಆಗುವ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರ ಬರಹಗಾರರ ಅಥವಾ ವಕೀಲರ ಮೊಹರು ಕಡ್ಡಾಯಗೊಳಿಸಬೇಕು. ಅನಧಿಕೃತ ವ್ಯಕ್ತಿಗಳನ್ನು ತಡೆಗಟ್ಟಬೇಕು, ಪತ್ರ ಬರಹಗಾರರಿಗೆ ಗುರುತಿನ ಚೀಟಿ ನೀಡಬೇಕು ಎಂದು ಆಗ್ರಹಿಸಿ ಮುಷ್ಕರ ನಡೆಯಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net