boi walk 5 ಕಿ.ಮೀ. ವಾಕ್ಥಾನ್ನಲ್ಲಿ ಸಾವಿರಾರು ಜನ ಭಾಗಿ
boi walk ಹುಬ್ಬಳ್ಳಿಯ ತೋಳನಕೆರೆ ಸರ್ಕಲ್ನಲ್ಲಿ ಭಾನುವಾರ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಏರ್ಪಡಿಸಿದ್ದ ವಾಕ್ಥಾನ್ಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಚಾಲನೆ ನೀಡಿದರು. ತಾರಿಣಿ ಚರಣ್ ಸಾಹು, ಅಭಿನವ್ ಪಾಂಡೆ, ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬ್ಯಾಂಕ್ ಆಫ್ ಇಂಡಿಯಾ ಸಂಸ್ಥಾಪನ ದಿನಾಚರಣೆ
ಆರೋಗ್ಯಕರ ಸಮಾಜಕ್ಕಾಗಿ ಒಟ್ಟಾಗಿ ನಡೆಯೋಣ
ಹುಬ್ಬಳ್ಳಿ: boi walk ಬ್ಯಾಂಕ್ ಆಫ್ ಇಂಡಿಯಾದ 121ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ-ಧಾರವಾಡ ವಲಯ ಕಚೇರಿ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ಜಾಗೃತಿ ವಾಕ್ಥಾನ್ ಭವ್ಯ ಯಶಸ್ಸು ಕಂಡಿತು.
ನಗರದ ತೋಳನಕೆರೆ ಸರ್ಕಲ್ನಲ್ಲಿ ಭಾನುವಾರ ಬೆಳಗ್ಗೆ ನಡೆದ 5ಕೆ ಹುಬ್ಬಳ್ಳಿ ವಾಕ್ಥಾನ್ನಲ್ಲಿ 1,200ಕ್ಕೂ ಅಧಿಕ ಜನರು ಉತ್ಸಾಹದಿಂದ ಭಾಗವಹಿಸಿದ್ದರು.
"ಬಲಿಷ್ಠ ರಾಷ್ಟ್ರ ಮತ್ತು ಆರೋಗ್ಯಕರ ಸಮಾಜಕ್ಕಾಗಿ ಒಟ್ಟಾಗಿ ನಡೆಯೋಣ' ಎಂಬ ಸಂದೇಶದೊಂದಿಗೆ ನಡೆದ ವಾಕ್ಥಾನ್ ಆರೋಗ್ಯ, ಒಗ್ಗಟ್ಟು ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು.
ನಶಾ ಮುಕ್ತ ಭಾರತ ಹಾಗೂ ಪ್ರಾಮಾಣಿಕತೆಯಿಂದ ಸಮೃದ್ಧಿಯತ್ತ ಎಂಬ ಮಹತ್ವದ ಸಾಮಾಜಿಕ ಸಂದೇಶವನ್ನೂ ಸಾರಲಾಯಿತು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ವಾಕ್ಥಾನ್ಗೆ ಚಾಲನೆ ನೀಡಿದರು.
ರಾಷ್ಟ್ರ ನಿರ್ಮಾಣದಲ್ಲಿ ಬ್ಯಾಂಕ್ ಆಫ್ ಇಂಡಿಯಾ ನೀಡುತ್ತಿರುವ ಕೊಡುಗೆ ಗಣನೀಯ. ಯುವಜನತೆ ಮಾದಕ ವ್ಯಸನಗಳಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಶಾಸಕ ಎಂ.ಆರ್. ಪಾಟೀಲ್, ಸಹಾಯಕ ಕಾರ್ಮಿಕ ಆಯುಕ್ತ ಮಂಜುನಾಥನ್ ಉಪಸ್ಥಿತರಿದ್ದರು. ಬ್ಯಾಂಕ್ ಆಫ್ ಇಂಡಿಯಾ ವಲಯ ಮುಖ್ಯಸ್ಥ ತಾರಿಣಿ ಚರಣ್ ಸಾಹು, ಬ್ಯಾಂಕ್ ಆಫ್ ಇಂಡಿಯಾದ ಸಮೃದ್ಧ ಇತಿಹಾಸ ಮತ್ತು ಪರಂಪರೆ ಕುರಿತು ಮಾತನಾಡಿದರು.
ಉಪ ವಲಯ ಮುಖ್ಯಸ್ಥ ಅಭಿನವ್ ಪಾಂಡೆ, ಅಧಿಕಾರಿಗಳ ಸಂಘ, ನೌಕರರ ಸಂಘ, ಸಿಬ್ಬಂದಿ, ಗ್ರಾಹಕರು, ಸಾರ್ವಜನಿಕರು ಭಾಗವಹಿಸಿದ್ದರು.