(bodybuild) ಹುಬ್ಬಳ್ಳಿಯಲ್ಲಿ ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆ

ಹುಬ್ಬಳ್ಳಿಯಲ್ಲಿ ಗುರುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ದೇಹದಾರ್ಢ್ಯ (bodybuild)ಸ್ಪರ್ಧೆ (ಮಿಸ್ಟರ್ ಕರ್ನಾಟಕ ಕ್ಲಾಸಿಕ್ -2026)ಯನ್ನು ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಉದ್ಘಾಟಿಸಿದರು.
ಹುಬ್ಬಳ್ಳಿಯಲ್ಲಿ ಗುರುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ದೇಹದಾರ್ಢ್ಯ (bodybuild)ಸ್ಪರ್ಧೆ (ಮಿಸ್ಟರ್ ಕರ್ನಾಟಕ ಕ್ಲಾಸಿಕ್ -2026)ಯನ್ನು ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಉದ್ಘಾಟಿಸಿದರು.
Published on
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ರಾಷ್ಟ್ರಮಟ್ಟದ ದೇಹದಾರ್ಢ್ಯ (bodybuild) ಸ್ಪರ್ಧೆ ಆಯೋಜಿಸಲಾಗುವುದು. ಈ ಕುರಿತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಭರವಸೆ ನೀಡಿದರು.
ಧಾರವಾಡ ಡಿಸ್ಟಿಕ್ಟ್ ಬಾಡಿ ಬಿಲ್ಡರ್ಸ್‌ ಅಸೋಸಿಯೇಷನ್ ವತಿಯಿಂದ ಇಲ್ಲಿಯ ನೆಹರು ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ (ಮಿಸ್ಟರ್ ಕರ್ನಾಟಕ ಕ್ಲಾಸಿಕ್ -2026) ಉದ್ಘಾಟಿಸಿ ಅವರು ಮಾತನಾಡಿದರು.
ದೇಹ ಸಂಪತ್ತಿಗಿಂತ ಮಿಗಿಲಾದ ಸಂಪತ್ತಿಲ್ಲ. ಆರೋಗ್ಯವೇ ಮಹಾಭಾಗ್ಯ. ಯುವಕರು ದುಶ್ಚಟಗಳಿಂದ ದೂರ ಇರಲು ಇಂಥ ವೇದಿಕೆಗಳು ಅತ್ಯಗತ್ಯ. ಸದೃಢ ದೇಹದಿಂದ ಸದೃಢ ದೇಶ ಹಾಗೂ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಶಾಲ್ ಅಬ್ಬಯ್ಯ, ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಶರೀಫ ಆದ್ವಾನಿ, ಅಸೋಸಿಯೇಷನ್ ಪದಾಧಿಕಾರಿಗಳಾದ ಕೃಷ್ಣ ಚಿಕ್ಕತುಂಬಳ, ಮಹ್ಮದ್ ಸಲೀಂ ಗೌರ್, ಅನೀಜ್ ಅಹ್ಮದ್ ದಲಾಲ, ಮಹ್ಮದ್ ಜಾಫರ್ ಶಾಬ್ದಿ, ಸೈಯದ್ ನದೀಮ್ ಶೇಖ್, ಭಕ್ಷಿ ಶಾಬ್ದಿ, ಕೆ. ನೀಲಕಂಠ, ಕಿರಣ ರೇವಡಿ, ಶಂಕರ ಪಿಳ್ಳೆ ಇತರರು ಇದ್ದರು. 12 ಜಿಲ್ಲೆಗಳ 120 ಸ್ಪರ್ಧಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net