Blood donation ಗಾಮನಗಟ್ಟಿಯಲ್ಲಿ 65 ಜನರಿಂದ ರಕ್ತದಾನ

Blood donation ಹುಬ್ಬಳ್ಳಿಯ ಗಾಮನಗಟ್ಟಿಯಲ್ಲಿ ಫ್ರೆಂಡ್ಸ್​ ಕ್ರಿಯೇಟಿವಿಟಿ ಕಮಿಟಿ (ಎಫ್ ಸಿಸಿ) ವತಿಯಿಂದ ಏರ್ಪಡಿಸಿದ್ದ ಬೃಹತ್​ ರಕ್ತದಾನ ಶಿಬಿರ.
Blood donation ಹುಬ್ಬಳ್ಳಿಯ ಗಾಮನಗಟ್ಟಿಯಲ್ಲಿ ಫ್ರೆಂಡ್ಸ್​ ಕ್ರಿಯೇಟಿವಿಟಿ ಕಮಿಟಿ (ಎಫ್ ಸಿಸಿ) ವತಿಯಿಂದ ಏರ್ಪಡಿಸಿದ್ದ ಬೃಹತ್​ ರಕ್ತದಾನ ಶಿಬಿರ.
Published on

ಪ್ರಮುಖ ಮುಖ್ಯಾಂಶಗಳು

  • ಫ್ರೆಂಡ್ಸ್ ಕ್ರಿಯೆಟಿವ್ ಕಮಿಟಿ ಕಾರ್ಯಕ್ಕೆ ಮೆಚ್ಚುಗೆ
  • ಗೆಳೆಯರ ವಿನೂತನ ಕಾರ್ಯಕ್ರಮ
ಹುಬ್ಬಳ್ಳಿ: blood donation ತಾಲೂಕಿನ ಗಾಮನಗಟ್ಟಿಯಲ್ಲಿ ಫ್ರೆಂಡ್ಸ್​ ಕ್ರಿಯೇಟಿವಿಟಿ ಕಮಿಟಿ (ಎ್​ಸಿಸಿ) ವತಿಯಿಂದ ಭಾನುವಾರ ಏರ್ಪಡಿಸಿದ್ದ ಬೃಹತ್​ ರಕ್ತದಾನ ಶಿಬಿರದಲ್ಲಿ 65ಕ್ಕೂ ಹೆಚ್ಚು ಸ್ವಯಂ ಸೇವಕರು ರಕ್ತದಾನ ಮಾಡಿದರು.
ಹುಬ್ಬಳ್ಳಿ ಕೆಎಂಸಿಆರ್​ಐ ಸಹಯೋಗದಲ್ಲಿ ಏರ್ಪಡಿಸಿದ್ದ ಶಿಬಿರದಲ್ಲಿ ನೇತ್ರ ತಪಾಸಣೆ ಸಹ ನಡೆಸಲಾಯಿತು. ಕಮಿಟಿ ಅಧ್ಯಕ್ಷ ಶಿವಾನಂದ ಬೀಸಗಲ್​, ಪಾಲಿಕೆ ಸದಸ್ಯ ಚಂದ್ರಶೇಖರ ಮನಗುಂಡಿ ಶಿಬಿರ ಉದ್ಘಾಟಿಸಿದರು.
ಕಮಿಟಿ ಸದಸ್ಯರು, ಮಹಿಳೆಯರು, ರೈತರು, ಯುವಕರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಗ್ರಾಮದ ಯುವಕರು ಒಂದೆಡೆ ಸೇರಿ ಸಾಮಾಜಿಕ ಸೇವಾ ಕಾರ್ಯ ಮಾಡುತ್ತಿರುವುದಕ್ಕೆ ಗ್ರಾಮದ ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಇದೇ ರೀತಿ ಇನ್ನಷ್ಟು ಸೇವಾ ಕಾರ್ಯಗಳು ಇದೇ ರೀತಿ ಮುಂದುವರಿಯಲಿ ಎಂದು ಹಾರೈಸಿದರು.
ಸದಸ್ಯರಾದ ಅಶೋಕ ಹೂಗಾರ, ಸುಧಾಕರ ಮಾಳಗಿ, ರಮೇಶ ಮಾಳಗಿ, ಹನೀಫ್​ ನರಗುಂದ, ಶಿವಾನಂದ ಮಾಳಗಿ ಉಮೇಶ ಕಾಡಮ್ಮನವರ, ಕರಬಸಪ್ಪ, ಅವರಾದಿ, ರಾಜು ಬೆಂಗೇರಿ, ಕರೆಪ್ಪ ಮುಮ್ಮಿಗಟ್ಟಿ, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net