ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳಿಯ 78ನೇ ಚಾರ್ಟರ್ ಡೇ ನಿಮಿತ್ತ ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹಾಗೂ ಕರ್ನಾಟಕ ಜಿಮ್ಖಾನಾ ಅಸೋಸಿಯೇಷನ್ ಸಹಯೋಗದಲ್ಲಿ ಇಲ್ಲಿಯ ದೇಶಪಾಂಡೆ ನಗರದ ಜಿಮ್ಖಾನ ಸಭಾಂಗಣದಲ್ಲಿ ಇತ್ತೀಚೆಗೆ ರಕ್ತದಾನ (blood) ಶಿಬಿರ ಏರ್ಪಡಿಸಲಾಗಿತ್ತು.
ಕರ್ನಾಟಕ ಜಿಮ್ಖಾನಾ ಅಸೋಸಿಯೇಷನ್ ಅಧ್ಯಕ್ಷ ಎಚ್.ಎನ್. ನಂದಕುಮಾರ ಮಾತನಾಡಿ, ಒಂದು ಯೂನಿಟ್ ರಕ್ತವು ಅನೇಕ ಜೀವಗಳನ್ನು ಉಳಿಸಬಲ್ಲದು. ನಾಗರಿಕರು ರಕ್ತದಾನ ಮಾಡಲು ಮುಂದೆ ಬರಬೇಕು. ಇದೊಂದು ಸಾಮಾಜಿಕ ಕಾಳಜಿ ಜತೆಗೆ ರಕ್ತದಾನಿಗಳ ಆರೋಗ್ಯವೂ ಸುಧಾರಿಸಲಿದೆ ಎಂದರು.
ರೋಟರಿ ಕ್ಲಬ್ ಆಫ್ ಹುಬ್ಬಳಿ ಅಧ್ಯಕ್ಷ ಕಿರಣ ಹೆಬ್ಸೂರ, ಸಮುದಾಯ ಆರೋಗ್ಯ ಮತ್ತು ಮಾನವೀಯ ಸೇವೆಗೆ ರೋಟರಿಯ ನಿರಂತರ ಬದ್ಧತೆ ಕುರಿತು ವಿವರಿಸಿದರು.
ಕಾರ್ಯದರ್ಶಿ ರಿಷಿ ತಿವಾರಿ ಮಾತನಾಡಿದರು. ಸ್ವಯಂಪ್ರೇರಿತ ರಕ್ತದಾನಿಗಳಿಂದ ಒಟ್ಟು 37 ಯೂನಿಟ್ ರಕ್ತ ಸಂಗ್ರಹವಾಯಿತು.
ಶಿಬಿರದಲ್ಲಿ ಅಶ್ವಿನ್ ಗುಡಿಸಾಗರ, ಸಮರ್ಥ ರೈಕರ, ಎಂ.ವಿ. ಕರಮರಿ, ಮಹೇಂದ್ರ ಠಕ್ಕರ್, ಅರವಿಂದ ಕುಬಸದ, ಸರೇಂದ್ರ ಪೋರ‌್ವಾಲ, ಅಬ್ದುಲ್ ಸಾದಿಕ್, ಅಮರ ಸೂಜಿ, ಹೇಮಲ್ ಶಾ, ಸಚಿನ್ ಮಹೇಂದ್ರಕರ, ಎಸ್.ಬಿ. ಕಡಬಿ, ಉಮೇಶ ಗಡಾದ, ಮಂಜುನಾಥ್ ಹೊಂಬಳ ಇತರರು ಇದ್ದರು.