ಆನಂದ ಮಾರ್ಗದ ತಂತ್ರ ಸಾಧನೆಯಿಂದ ಉತ್ತಮ ಸಮಾಜ bliss

bliss ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಯೋಗ ಶಿಬಿರದಲ್ಲಿ ಮುಖ್ಯ ತರಬೇತುದಾರ ಆಚಾರ್ಯ ಸುಶ್ಮೀತಾನಂದ ಅವಧೂತ, ಗಣೇಶ ಭಟ್ ಉಪ್ಪೋಣಿ, ಆಚಾರ್ಯ ರಸಸಿದ್ಧಾನಂದ ಅವಧೂತ ಹಾಗೂ ಇತರರು ಪಾಲ್ಗೊಂಡಿದ್ದರು.
bliss ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಯೋಗ ಶಿಬಿರದಲ್ಲಿ ಮುಖ್ಯ ತರಬೇತುದಾರ ಆಚಾರ್ಯ ಸುಶ್ಮೀತಾನಂದ ಅವಧೂತ, ಗಣೇಶ ಭಟ್ ಉಪ್ಪೋಣಿ, ಆಚಾರ್ಯ ರಸಸಿದ್ಧಾನಂದ ಅವಧೂತ ಹಾಗೂ ಇತರರು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬ್ರಹ್ಮ ಭಾವನೆ ಬಹಳ ಮುಖ್ಯ.
  • ತಂತ್ರ ಧ್ಯಾನ ಮಾಡಿದರೆ ಸಮಾಜದಲ್ಲಿ ಪ್ರತಿಯೊಬ್ಬರೂ ನೆಮ್ಮದಿಯಿಂದ ಬದುಕುತ್ತಾರೆ.
  • ದಿನದ ಎರಡು ಸಮಯದಲ್ಲಿ ಧ್ಯಾನ ಮಾಡಿ.
ಹುಬ್ಬಳ್ಳಿ :
ಮೂರು ದಿನಗಳವರೆಗೆ ಆಯೋಜಿಸಿದ್ದ ಯೋಗ ತರಬೇತಿ ಶಿಬಿರದಲ್ಲಿ ಮುಖ್ಯ ತರಬೇತುದಾರರಾಗಿ ಮಾತನಾಡಿದ ಅವರು, ವಿಶಿಷ್ಟವಾದ ತಂತ್ರ ಧ್ಯಾನ ಮಾಡಿದರೆ ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿ, ನೆಮ್ಮದಿಯಿಂದ ಬದುಕುತ್ತಾರೆ ಎಂದರು.
ದಿನದ ಎರಡು ಸಮಯದಲ್ಲಿ ಧ್ಯಾನ ಮಾಡಿದರೆ ಮನಸ್ಸು ಆರೋಗ್ಯವಾಗಿ ಇರುವ ಮೂಲಕ ಒಂದು ಆದರ್ಶ ಸಮಾಜ ತನ್ನಷ್ಟಕ್ಕೆ ತಾನೆ ನಿಮಾಣ ಆಗುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬರೂ ಉತ್ತಮವಾಗಿ ಆರ್ಥಿಕ, ಸಾಮಾಜಿಕ, ಆಧ್ಯಾತ್ಮಿಕವಾಗಿ ಬಾಳ ಬೇಕಾದರೆ ಪ್ರಭಾತ್ ರಂಜನ್ ಸರ್ಕಾರ್ ಅವರ ಪ್ರಗತಿ ಶೀಲ ಉಪಯೋಗ ತತ್ವ ಹೊಸ ಆರ್ಥಿಕ ನೀತಿಯನ್ನು ತಿಳಿಯಬೇಕು ಎಂದು ತಿಳಿಸಿದರು.
ಶಿರಸಿಯ ಗಣೇಶ ಭಟ್ ಉಪ್ಪೋಣಿ ಮಾತನಾಡಿ, ಜಾತಿ, ಮತ, ಬೇದ ಭಾವದಿಂದ ದೂರ ಇರ ಬೇಕಾದರೆ ಬ್ರಹ್ಮ ಭಾವನೆ ಬಹಳ ಮುಖ್ಯ. ಈ ಭಾವನೆ ಬರಬೇಕಾದರೆ ಬ್ರಹ್ಮ ಸಾಧನೆ ಮಾಡಿದರೆ ಮಾತ್ರ ಸಾಧ್ಯ ಎಂದರು.
ಆಚಾರ್ಯ ರಸಸಿದ್ಧಾನಂದ ಅವಧೂತ. ಬಸವರಾಜ ಬಿಡ್ನಾಳ, ಬೆಂಗಳೂರಿನ ಪ್ರಣವ, ದೀಪೇಶ್ವರ, ಬಸವರಾಜ ದೊಡ್ಡಮನಿ ಹಾಗೂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net